ತಪಸ್ಸಿನಿಂದ ಭೂಮಿಗೆ ಗಂಗೆ ಇಳಿಸಿದ ಭಗೀರಥ

ಚಿತ್ರದುರ್ಗ:

     ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ಇಳಿಸಿ, ಭೂಲೋಕದ ಸಕಲ ಜೀವಿಗಳ ದಾಹ ತಣಿಸಿದ ಮಹಾತ್ಮ ಎಂದು ಚಳ್ಳಕೆರೆ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಶಾಸ್ತ್ರದ ಪ್ರಾಧ್ಯಾಪಕ ಟಿ ನಾಗರಾಜ ಹೇಳಿದರು.

     ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.

    ಭಾರತೀಯ ಸಂಸ್ಕೃತಿ ಇಡೀ ಪ್ರಪಂಚದಲ್ಲಿಯೇ ವಿಶಿಷ್ಟತೆ ಹೊಂದಿದ್ದು, ಅನೇಕ ದಾರ್ಶನಿಕರು, ಸಾಧು ಸಂತರು, ಸತ್ಪುರುಷರನ್ನು ಪ್ರಪಂಚಕ್ಕೆ ಕೊಡುಗೆ ನೀಡಿದೆ. ಇವರೆಲ್ಲರೂ ಸಕಲ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ ಅಂತಹ ಸತ್ಪುರುಷರಲ್ಲಿ ಭಗೀರಥ ಮಹರ್ಷಿ ಪ್ರಮುಖರು ಎಂದು ಹೇಳಿದರು

    ಭಗೀರಥರ ಕುರಿತು ವಿಧ್ವಾಂಸರು ಹೇಳುವಂತೆ, ಭಗೀರಥ ಬಹುದೊಡ್ಡ ಮಹಾರಾಜ, ಸಕಲ ವೈಭವಗಳಿದ್ದರೂ, ಆತನ ತಂದೆ ಹಾಗೂ ಹಿರಿಯರ ಮಹದಾಸೆಯಂತೆ ದೇವಗಂಗೆಯಿಂದ ಪವಿತ್ರಗೊಳಿಸಲು, ವೈಭೋಗವನ್ನು ತೊರೆದು, ಪ್ರತಿಜ್ಞೆಯೊಂದಿಗೆ ಕಠಿಣ ತಪಸ್ಸು ಮಾಡಿದರು.

     ಗಂಗೆಯನ್ನು ಭೂಮಿಗೆ ಇಳಿಸಲು ಭಗೀರಥನ ತಾತ ಆಂಶುಮಂತನು ಸಿಂಹಾಸನವೇರದೆ ತಪಸ್ಸಿಗಾಗಿ ಕಾಡಿಗೆ ಹೋದ. ಜೀವನವಿಡೀ ತಪೋನಿರತನಾದರೂ ಗಂಗೆ ಒಲಿಯಲಿಲ್ಲ. ನಂತರ ಈ ಹೊಣೆ ಹೊತ್ತ ಭಗೀರಥನ ತಂದೆ ದೀಲಿಪ ಸಫಲನಾಗದೆ ತನ್ನ ಮಗ ಭಗೀರಥನಿಗೆ ಜವಾಬ್ದಾರಿಯನ್ನು ಒಪ್ಪಿಸಿದರು. ಛಲಗಾರನಾದ ಭಗೀರಥನು ಭೂ ಲೋಕಕ್ಕೆ ಗಂಗೆಯನ್ನು ಇಳಿಸಿಸಬೇಕೆಂದು, ಮೊದಲು ಆಹಾರವನ್ನು ತ್ಯಜಿಸಿ ನೀರನ್ನು ಮಾತ್ರ ಕುಡಿಯುತ್ತಾ ತಪಸ್ಸಿಗೆ ತೊಡಗಿ, ಬಳಿಕ ನೀರು, ಗಾಳಿ ಸೇವನೆಯನ್ನೂ ನಿಲ್ಲಿಸಿ ಉಗ್ರವಾದ ತಪಸ್ಸು ಮುಂದುವರಿಸಿದ್ದರಿಂದ, ಬೆಂಕಿ ಸೃಷ್ಟಿಯಾಗಿ ಮೂರು ಲೋಕಕಗಳನ್ನೂ ಸುಡಲಾರಂಬಿಸಿತು. ಆಗ ಬ್ರಹ್ಮ ಪ್ರತ್ಯಕ್ಷನಾಗಿ ಗಂಗೆಯನ್ನು ಕಳುಹಿಸಿದ ಎಂದು ಹೇಳಿದರು.

     ಗಂಗೆಯು ‘ನನ್ನ ರಭಸಕ್ಕೆ ಭುವಿಯು ಕೊಚ್ಚಿ ಹೋಗಬಹುದು, ನನ್ನ ವೇಗವನ್ನು ತಡೆಯಲು ಸಮರ್ಥನಾದ ಶಿವನನ್ನು ತಪಸ್ಸು ಮಾಡಿ ಒಲಿಸಿಕೊ’ ಎಂದಾಗ, ಭಗೀರಥನು ನಂತರವೂ ಛಲ ಬಿಡದೆ ಶಿವನನ್ನು ತಪಸ್ಸಿನಿಂದ ಒಲಿಸಿಕೊಂಡು, ಶಿವನು ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸಿ ಭೂ ಲೋಕಕ್ಕೆ ಗಂಗೆಯನ್ನು ಇಳಿಸಿದ ಎಂದು ಐತಿಯ್ಯದಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು

     ಸಮಾಜದಲ್ಲಿ ಇಂದಿಗೂ ಕಠಿಣ ಪರಿಶ್ರಮಕ್ಕೆ ಭಗೀರಥ ಯತ್ನ ಎಂದೇ ಉದಾಹರಣೆ ನೀಡಲಾಗುತ್ತದೆ. ಕಠಿಣ ಪರಿಶ್ರಮದಿಂದ ಭೂಮಿಗೆ ಗಂಗೆ ತರಲಾದರೂ, ಆಧುನಿಕ ಪ್ರಪಂಚದಲ್ಲಿ ಭೂಮಿಯಲ್ಲಿನ ಮನುಷ್ಯರು ನೀರನ್ನು ಸದ್ಬಳಕೆ ಮಾಡದೆ, ನೀರು ಕಲುಷಿತಗೊಳಿಸುತ್ತಾರೆ ಮತ್ತು ಪರಿಸರವನ್ನು ನಾಶಪಡಿಸಿ ಪ್ರಾಣಿ ಪಕ್ಷಿಗಳಿಗೆ ತೊಂದರೆ ಉಂಟು ಮಾಡುತ್ತಾರೆ. ನೀರಿಗಾಗಿಯೇ ಮುಂದೊಂದು ದಿನ ಮಹಾಯುದ್ಧ ಸಂಭವಿಸಿದರೂ ಅಚ್ಚರಿಯಿಲ್ಲ ಎಂದು ಟಿ. ನಾಗರಾಜ್ ಹೇಳಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಭಗೀರಥರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್ ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link