ದಾವಣಗೆರೆ:
ಮಹಾನಗರ ಪಾಲಿಕೆಯ 5ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಬೂದಾಳು ರಸ್ತೆಯ 2ನೇ ಮುಖ್ಯ ರಸ್ತೆಯಲ್ಲಿರುವ ಚರಂಡಿಯ ಒಳಗಡೆ ಕುಡಿಯುವ ನೀರಿನ ಪೈಪ್ಲೈನ್ ಹಾದು ಹೋಗಿದ್ದು, ಚರಂಡಿ ನೀರು ಕುಡಿಯುವ ನೀರಿಗೆ ಸೇರುತ್ತಿರುವುದರಿಂದ ಈ ಭಾಗದ ಜನರು ಹಲವು ರೋಗ-ರುಜಿನಗಳ ಭೀತಿಯಿಂದ ಬದುಕುತ್ತಿದ್ದಾರೆ. ಆದ್ದರಿಂದ ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿ ಕಾಂಗ್ರೆಸ್ ಮುಖಂಡ ಮುದ್ದಾಪುರ ರೆಹಮಾನ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಿತವಾಗಿ, ಕಲುಷಿತಗೊಂಡಿರುವ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಚರಂಡಿಯಿಂದ ಕುಡಿಯುವ ನೀರಿನ ಪೈಪಿನಲ್ಲಿ ಮಲಿನ ನೀರು ಸೇರುತ್ತಿದೆ. ಇನ್ನು ಕೊನೆ ಭಾಗಕ್ಕೆ ಚರಂಡಿ ನೀರು ಕಳೆದ 4 ವರ್ಷಗಳಿಂದ ಸಂಗ್ರಹಣೆಯಾಗುತ್ತ್ತಿದೆ. ದುರಸ್ತಿಗೊಂಡಿರುವ ಚರಂಡಿಯಲ್ಲಿ ಹಂದಿಗಳು, ನಾಯಿಗಳು ದಿನನಿತ್ಯ ಜೀವಿಸುತ್ತಿವೆ ಇದರಿಂದ ಈ ಭಾಗದಲ್ಲಿ ಆಟವಾಡುವ ಮಕ್ಕಳಿಗೆ, ಜನರಿಗೆ ಸಾಂಕ್ರಾಮಿಕ ರೋಗಗಳು ತಗಲುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅತೀ ಶೀಘ್ರದಲ್ಲಿಯೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಮದು ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮೌನೇಶಾಚಾರಿ, ಶಬ್ಬೀರ್ ಸಾಬ್, ಹುಸೇನ್ ಸಾಬ್, ಹನುಮಂತಪ್ಪ, ಮೈಲಾರಪ್ಪ, ಸಿಗ್ಲಿ ಹುಸೇನ್ ಸಾಬ್, ಎಸ್.ಎ.ನಾಗರಾಜಪ್ಪ, ಅಲ್ಲಾಭಕ್ಷ್, ಬಸೀರ್ ಸಾಬ್, ಹೊನ್ನೂರು ಸಾಬ್, ರಾಟೆಮನೆ ರಾಜಾಸಾಬ್, ಖಾಸೀಂ ಸಾಬ್, ಷಫೀವುಲ್ಲಾ, ರಜಾಕ್ ಸಾಬ್, ತಿಮ್ಮಣ್ಣ, ಭರಮಣ್ಣ, ಮೈನುದ್ದೀನ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
