ಮಳೆ ಗಾಳಿಗೆ ಧರೆಗುರುಳಿದ ಮರಗಳು

ತಿಪಟೂರು :

     ನಗರದಲ್ಲಿ ಇಂದು ಸಂಜೆ ಸುರಿದ ಸಾಮಾನ್ಯಮಳೆಗೆ ನಗರದ ಬಿ.ಹೆಚ್.ರಸ್ತೆ, ಇಂದಿರಾನಗರ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿವೆ.

    ಇಂದು ಸಂಜೆ ಅಲ್ಪ ಮಳೆ ಮತ್ತು ಬೃಹತ್‍ಪ್ರಮಾಣದ ಗಾಳಿ ಬೀಸಿದ ಪರಿಣಾಮವಾಗಿ ನಗರದ ಬಿ.ಹೆಚ್.ರಸ್ತೆಯ ತ್ರಿಮೂರ್ತಿ ಚಿತ್ರಮಂದಿರದಿಂದ ಹಿಡಿದ ನಗರದ ಗುರುದರ್ಶನ್ ಹೋಟೆಲ್‍ವರೆಗೆ 4 ಮರಗಳು ಬಿದ್ದು ವಿದ್ಯುತ್ ವ್ಯತ್ಯಯವುಂಟಾಗಿದೆ. ಇನ್ನು ನಗರದ ಇಂದಿರಾನಗರದಲ್ಲಿ ರಸ್ತೆಪಕ್ಕದ ಈಚಲಮರ ವಿದ್ಯುತ್ ತಂತಿಮೇಲೆಬಿದ್ದು 2 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಮನೆ ಮೇಲೆ ಬಿದ್ದ ಮರ :

     ಕೆ.ಆರ್.ಬಡಾವಣೆಯ ಬನಶಂಕರಿ ಟ್ರೇಡರ್ಸ್ ಪಕ್ಕದ ಮನೆಯ ಮೇಲೆ ರಸ್ತೆ ಪಕ್ಕದ ಬೃಹತ್ ಸಿಲ್ವರ್ ಮರ ಬಿದ್ದಿದ್ದು ಅದೃಷ್ಠವಶಾತ್ ಹಾವುದೇ ಹಾನಿಯಾಗಿಲ್ಲ.ಎಚ್ಚೆತ್ತುಕೊಳ್ಳದ ನಗರಸಭೆ : ನಗರದಲ್ಲಿ ಸುರಿದ ಅಲ್ಪಮಳೆಗೆ ಇಂದು ನಗರದ ಇಂದಿರಾನಗರ, ಗಾಂಧಿನಗರಕ್ಕೆ ಸಂಪರ್ಕಕಲ್ಪಿಸುವ ಇಂದಿರಾನಗರ ರೈಲ್ವೇ ಅಂಡರ್ ಬ್ರಿಡ್ಜ್ ಹತ್ತಿರ ಮಳೆನೀರಿನ ಜೊತೆ ಚರಂಡಿನೀರು ಸೇರಿ ಹೆಚ್ಚಿನ ನೀರುನಿಂತು ಸಂಚಾರಕ್ಕೆ ಅಡ್ಡಿಯಾಯಿತು.

ನಗರಸಭೆಯವರು ಈಗಲಾದರೂ ರಾಜಾಕಾಲುವೆಗಳನ್ನು ಸ್ವಚ್ಚಗೊಳಿಸಲಿ :

    ನಗರದ ಗುರುಕುಲ ಸೂಪರ್ ಮಾರ್ಕೆಟ್ ಪಕ್ಕದಲ್ಲಿರುವ ಮಾರನಗೆರೆ ಯಿಂದ ಬಂದಿರುವ ರಾಜಾಕಾಲುವೆಯು ಕಸಕಟ್ಟಿಗಳಿಂದ ತುಂಬಿದ್ದು ಮಳೆಗಾಲದಲ್ಲಾದರೂ ಸೂಕ್ತವಾಗಿ ಕಸಕಡ್ಡಿಗಳನ್ನು ತೆಗೆಯ ಬೇಕೆಂದು ಪಕ್ಕದ ಮಳಿಗೆಯವರು ಹಲವಾರು ಬಾರಿ ಹೇಳಿದರು ನಗರಸಭೆಯ ಸಿಬ್ಬಂದಿಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಮಳೆಗಾಲವಾದ ಈ ಸಂದರ್ಭದಲ್ಲಾದರೂ ಎಲ್ಲಾ ಚರಂಡಿಗಳನ್ನು ಸೂಕ್ತವಾಗಿ ನಿರ್ವಹಿಸಿದರೆ ನೀರು ಸರಾಗವಾಹಿ ಹರಿಯುತ್ತದೆಂಬುದು ಸಾರ್ವಜನಿಕರ ಆಶಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link