ಮಧುಗಿರಿ:
ಜಿಲ್ಲೆಗೆ ಅನ್ವಯಿಸಿದ ಚುನಾವಣಾ ನೀತಿ ಸಂಹಿತೆ ನಮ್ಮ ಮಧುಗಿರಿಗೆ ಮಾತ್ರ ಅನ್ವಯಿಸುತ್ತಿದೆ ಎಂದು ತಾಲ್ಲೂಕು ಆಡಳಿತದ ಅಧಿಕಾರಿಗಳು ಸಬೂಬು ಹೇಳುತ್ತಾ ಶ್ರೀ ಶಂಕರಚಾರ್ಯರ ಜಯಂತಿ ಯನ್ನು ಆಚರಣೆ ಮಾಡದೆ ಅಪಮಾನ ಮಾಡಿರುವುದು ಖಂಡನೀಯ ಎಂದು ಶ್ರೀ ಶಂಕರ ಸೇವಾ ಸಮಿತಿಯ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್ ಆರೋಪಿಸಿದ್ದಾರೆ.
ಉಪವಿಭಾಗಾಧಿಕಾರಿ ಬಿ.ಎನ್.ವೀಣಾ ರವರಿಗೆ ಸಮೂದಾಯದ ಮುಖಂಡರೊಂದಿಗೆ ಮನವಿ ಪತ್ರ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಮಿತಿಯ ಮುಖ್ಯಸ್ಥರಾದ ತಹಶೀಲ್ದಾರ್‍ರವರು ಶ್ರೀ ಶಂಕರ ಚಾರ್ಯರ ಜಯಂತಿಯನ್ನು ಆಚರಿಸುವ ಬಗ್ಗೆ ನಮ್ಮ ಸಮೂದಾಯದ ಹಿರಿಯರನ್ನಾಗಲಿ ಅಥವಾ ಸಮಿತಿಯ ಪದಾಧಿಕಾರಿಗಳನ್ನು ಸಂರ್ಪಕಿಸಿ ಚರ್ಚಿಸಿರುವುದಿಲ್ಲ.
ತಾಲ್ಲೂಕು ಆಡಳಿತ ಶ್ರೀ ಶಂಕರಚಾರ್ಯರ ಜಯಂತಿ ಯನ್ನು ಆಚರಣೆಯನ್ನು ಸಹ ಮಾಡದೆ ಅಪಮಾನ ಮಾಡಿದೆ ಈ ಬಗ್ಗೆ ಸಂಭಂಧಪಟ್ಟವರ ವಿರುದ್ಧ ಉಪವಿಭಾಗಾಧಿಕಾರಿಗಳು ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಪುರಸಭಾ ಸದಸ್ಯರಾದ ನಾರಾಯಣ್ ಕೆ. ನಾಗರಾಜು, ಲಕ್ಷ್ಮೀಪ್ರಸಾದ್, ಪಿ.ಆರ್.ನಂಜುಂಡಯ್ಯ, ನಾಗರಾಜು, ನಾಗಭೂಷಣ್, ರಾಜೀವ್, ಆಶ್ವಥ್, ಮುರುಳಿ, ಚಿ.ಸೂ.ಕೃಷ್ಣಮೂರ್ತಿ, ಸೂರ್ಯನಾರಾಯಣರಾವ್, ವಿಪ್ರ ಯುವ ವೇದಿಕೆಯ ಅಧ್ಯಕ್ಷ ಆಶ್ವಥ್ , ಪಧಾಧಿಕಾರಿಗಳಾದ ವಿನಯ್ ಶರ್ಮ, ಗುರುಪ್ರಸಾದ್, ಭೀಮೇಶ್ ಶರ್ಮ, ಬಡಕನಹಳ್ಳಿ ರಾಘವೇಂದ್ರ, ಮನೋಜ್, ಶ್ರೀನಿವಾಸ ಶಾಸ್ರಿ, ರಾಘವೇಂದ್ರ, ಶಾರಾದ, ಶಕುಂತಲಾ, ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ