ಹರಪನಹಳ್ಳಿ:
ಜೆಡಿಎಸ್ ಪಕ್ಷದ ಮುಖಂಡ ಎಚ್.ವಿಶ್ವನಾಥ ಅವರು ಕಾಂಗ್ರೆಸ್ಸಿನ ಕೆಲ ಶಾಸಕರು ಸಿದ್ದರಾಮಯ್ಯ ಅವರ `ಚಮಚಾಗಳು’ ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಿ.ಟಿ. ಪರಮೇಶ್ವರನಾಯ್ಕ್ ಅವರು `ಹಿರಿಯ ರಾಜಕಾರಣಿಗಳು ಪದ ಬಳಕೆ ಬಗ್ಗೆ ಹಿಡಿತವಿದ್ದರೆ ಒಳ್ಳೆಯದು’ ಎಂದು ಸಲಹೆ ನೀಡಿದ್ದಾರೆ.,
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, `ಸಿದ್ದರಾಮಯ್ಯ ನಮ್ಮ ನಾಯಕರು. ಅವರ ಮಾರ್ಗದರ್ಶನ ನಮಗೆ ಅತ್ಯವಶ್ಯವಾಗಿದೆ’ ಎಂದರು.
`ಯಡಿಯೂರಪ್ಪ ಅವರು ಗಡುವು ನೀಡುವ ಕಾರ್ಯಗಳು ನಿರಂತರವಾಗಿವೆ. ಸಮಿಶ್ರ ಸರ್ಕಾರ ಪೂರ್ಣಾವಧಿ ಅಧಿಕಾರಿ ನಡೆಸಲಿದೆ. ಮೇ 23ರ ನಂತರವೂ ಸರ್ಕಾರ ಸುಭದ್ರವಾಗಿರುತ್ತೆ. ಬಳ್ಳಾರಿ ಸೇರಿ ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ಭವಿಷ್ಯ ನುಡಿದರು.
ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಖಚಿತ. ಚಿಂಚೋಳಿ ಕ್ಷೇತ್ರದಲ್ಲಿ ಉಮೇಶ ಜಾದವ್ ಅವರಿಗೆ ತಕ್ಕ ಮತದಾರರು ತಕ್ಕಪಾಠ ಕಲಿಸಲಿದ್ದಾರೆ’ ಎಂದು ಅವರು ಹೇಳಿದರು.