ರಸ್ತೆ ಹಗಲಿಕರಣ ನೆಪದಲ್ಲಿ ಕಟ್ಟಡ ಹೊಡೆಯುವ ಉನ್ನಾರ – ಶಿವನಗೌಡ

ಜಗಳೂರು :

     ಪಟ್ಟಣದ ಹೊರಕೆರೆಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ಕಟ್ಟಡ ನಿರ್ಮಾಣಕ್ಕೆ ನಮ್ಮ ತಂದೆಯವರು ಜಮಿನು ನೀಡಿದ್ದಕ್ಕೆ ಪರ್ಯಾಯವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಮುಖ್ಯ ರಸ್ತೆಯ ಪಕ್ಕದಲ್ಲಿ ನಿವೇಶನ ನೀಡಿದ ಈ ಸ್ಥಳದಲ್ಲಿ ನಾವು ಕಟ್ಟಡ ನಿರ್ಮಿಸಿದ್ದು ಈಗ ಲೋಕೊಪಾಯೋಗಿ ಇಲಾಖೆಯವರು ರಸ್ತೆ ಹಗಲಿಕರಣ ನೆಪದಲ್ಲಿ ಕಟ್ಟಡ ಹೊಡೆಯುವ ಉನ್ನಾರ ನಡೆಸುತ್ತಿದೆ ನಮಗೆ ಪರ್ಯಾಯ ಸ್ಥಳ ನೀಡಿದ ನಂತರ ಕಟ್ಟಡ ತೆರವು ಗೊಳಿಸಲಿ ಎಂದು ಎಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಶಿವನಗೌಡ ಆಗ್ರಹಿಸಿದ್ದಾರೆ.

      ಪಟ್ಟಣದ ವಿದ್ಯಾನಗರದಲ್ಲಿರುವ ಕಾರ್ಯ ನಿರತ ಪರ್ತಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು. 1994 ನೇಸಾಲಿನಲ್ಲಿ ತಾಲೂಕಿಗೆ ಮಾದರಿ ಪ್ರಾಥಮಿಕ ಪಾಠ ಶಾಲೆ ಮುಂಜುರಾಗಿತ್ತು. ನಿವೇಶನದ ಕೊರೆತೆಯಿಂದ ಶಾಲೆ ಬೇರೆ ತಾಲೂಕಿಗೆ ಸ್ಥಳಾಂತರ ಗೊಳ್ಳುತ್ತಿತ್ತು .

      ಅದ್ದರಿಂದ ನಮ್ಮ ತಂದೆ ನಿಂಗನ ಗೌಡ್ರು ನಮ್ಮ ಸ.ನಂ 299 ಮತ್ತು 300 ರಲ್ಲಿದ್ದ ಜಮಿನಿನಲ್ಲಿ 100* 130 ಅಡಿ ಜಾಗವನ್ನು ನೀಡಿದ್ದರು. ಈ ಜಾಗಕ್ಕೆ ಪರ್ಯಾಯವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿರುವ 40*12 ಜಾಗವನ್ನು ನೀಡಿದ್ದರು. ಶಾಲೆಗೆ ನಮ್ಮ ತಂದೆ ನಿವೇಶನ ನೀಡಿದ್ದಕ್ಕೆ ನೊಂದವಣೆಯಾಗಿಲ್ಲ. ಆದರೂ ಸಹ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನಾವು ಸುಮ್ಮನಿದ್ದೇವೆ.

       ಚಳ್ಳಕೆರೆ ಮಾರ್ಗದ ರಸ್ತೆ ಹಗಲಿಕರಣವಾಗುತ್ತಿರುವುದರಿಂದ ನಮ್ಮ ಕಟ್ಟಡ ಸಂಪೂರ್ಣವಾಗಿ ಹೋಗಲಿದೆ ಎಂದು ಲೋಕೊಪಾಯೋಗಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ನಮಗೆ ಪರ್ಯಾಯ ಜಾಗ ನೀಡಿ ರಸ್ತೆ ಹಗಲಿಕರಣ ಮಾಡಿಕೊಳ್ಳಲಿ ಎಂದರು. ನಾವು ನಾಲ್ಕು ಮಂದಿ ಅಣ್ಣ ತಮ್ಮಂದಿರಿದ್ದು ನಮಗೆ ಈ ಕಟ್ಟಡವೇ ನಮ್ಮಕುಟುಂಬಕ್ಕೆ ಆಧಾರವಾಗಿದೆ ಎಂದು ಹೇಳಿದರು.

         ಈ ಸಂದರ್ಭದಲ್ಲಿ ಮುಖಂಡರಾದ ಈಶ್ವರಪ್ಪ, ಶಂಭುಲಿಂಗಪ್ಪ, ಕೋಟ್ರೆಶ, ಮಹೇಶ್ ಗೌಡ್ರು, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಡಿವಿಯಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link