ನಾಮಪತ್ರ ಸಲ್ಲಿಕೆಯಾಗದಿರಲು ಮೂಲಭೂತ ಸೌಕರ್ಯಗಳ ಲೋಪವೇ ಕಾರಣ!

ತಿಪಟೂರು

      ಮೇ 29 ರಂದು ಜರುಗಲಿರುವ ತಿಪಟೂರು ನಗರಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಕನಸುಕಾಣುತ್ತಿರುವ ಆಕಾಂಕ್ಷಿಗಳಿಗೆ ನಗರಸಭೆಯ ಸಿಬ್ಬಂದಿಯು ತಣ್ಣಿರೆರಚುವ ಲಕ್ಷಣಗಳು ಕಂಡುಬರುತ್ತಿದ್ದು ಆಕಾಂಕ್ಷಿಗಳು ಸೋಮವಾರ ನಗರಸಭೆಯ ಮುಂದೆ ಗದ್ದಲದ ವಾತಾವರಣ ನಿರ್ಮಾಣಮಾಡಿದರು.

       180 ಕೋಟಿ ಬಜೆಟ್ ಮಂಡಿಸಿ, 1.88 ಕೋಟಿ ಉಳಿತಾಯ ಬಜೆಟ್ : ಹೇಳಿಕೊಳ್ಳುವ ನಗರಸಭೆಗೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದರೆ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೇಗೆ ಸಾಧ್ಯ, ಸಾರ್ವಜನಿಕರ ಕೋಟ್ಯಂತರ ತೆರಿಗೆಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದ್ದು, ಸಾರ್ವಜನಿಕರ ತೆರಿಗೆ ಕಟ್ಟಲು ಚಲನ್‍ತೆಗೆದುಕೊಡಲು ಒಂದು ಪ್ರಿಂಟರ್ ಯು.ಪಿ.ಎಸ್‍ಗೂ ಗತಿಯಿಲ್ಲ.

      ಇನ್ನೂ ಮೇ 23ರ ನಗರಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಅದಕ್ಕಾಗಿ ಮೇ 16ಕ್ಕೆ ನಾಮಪತ್ರಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅದಕ್ಕೆ ಬೇಕಾದ ದಾಖಲಾತಿಗಳನ್ನು ಸಲ್ಲಿಸಲು ನಗರಸಭೆಯ ಬೇಬಾಕಿ ಪ್ರಮಾಣ ಪತ್ರವು ಮುಖ್ಯವಾಗಿದ್ದು ನಗರಸಭೆಯ ಅಧಿಕಾರಿಗಳು ಮತ್ತು ಹೊರಗುತ್ತಿಗೆಯ ನೌಕರರು ಚಲನ್‍ನೀಡಲು ನಾನಾಕಾರಣಗಳನ್ನು ಹೇಳುತ್ತಿದ್ದಾರೆಂದು ಅಭ್ಯರ್ಥಿಗಳು ಗದ್ದಲವನ್ನು ಮಾಡಿದ್ದು ಸೋಮವಾರ ಮಧ್ಯಾಹ್ನ 3 ಗಂಟೆಯಲ್ಲಿ ಜರುಗಿದೆ.

      ವಿದ್ಯುತ್ ಇದ್ದರೆ ಸರ್ವರ್ ಇಲ್ಲ ಸರ್ವರ್ ಸರಿಯಿದ್ದಾಗ ವಿದ್ಯುತ್ ಇಲ್ಲ : ಭಾನುವಾರ ಸಂಜೆ ಬಂದ ಮಳೆಯಿಂದ ನಗರದ ಬಹುತೇಕ ಮರಗಳು ಬಿದ್ದು ವಿದ್ಯುತ್ ವ್ಯತ್ಯಯವುಂಟಾಗಿದ್ದು ಎಲ್ಲರಿಗೂ ಗೊತ್ತಿತ್ತು. ಆದರೆ ನಗರಸಭೆಯಲ್ಲಿ ವಿದ್ಯುತ್‍ಗೆ ಪರ್ಯಾಯವಾಗಿ ಯು.ಪಿ.ಎಸ್ ಇಲ್ಲದೆ ಇದ್ದುದೆ ಈ ಗದ್ದಲಕ್ಕೆ ಕಾರಣವಾಗಿತ್ತು. ವಿದ್ಯುತ್ 3 ಗಂಟೆಗೆ ಬರುತ್ತದೆಂದು ತಿಳಿದು ಅಲ್ಲಿಯವರೆಗೂ ಕಾಯ್ದ ಚುನಾವಾಣಾ ಆಕಾಂಕ್ಷಿಗಳಿಗೆ ಗಾಯದಮೇಲೆ ಬರೆ ಎಳೆದಂತೆ ವಿದ್ಯುತ್ ಬಂದ ತಕ್ಷಣ ಸರ್ವರ್‍ದೋಷವಿರುತ್ತದೆ ಎಲ್ಲವೂ ಸರಿಯಿದ್ದರೆ ಪ್ರಿಂಟರ್‍ನ ಕಾಟ್ರಿಡ್ಜ್ ಇಲ್ಲವೆನ್ನುತ್ತಾರೆಂದು ಅರ್ಜಿಸಲ್ಲಿಸಿದವರು ನಗರಸಭೆಯ ವಿರುದ್ದ ಹರಿಹಾಯ್ದರು.

      ಈ ಸಮಸ್ಯೆಗೆ ಪರಿಹಾರದ ಬಗ್ಗೆ ನಗರಸಭಾ ಆಯುಕ್ತರನ್ನು ಪ್ರಶ್ನಿಸಿದಾಗ ಬೆಳಿಗ್ಗೆಯಿಂದಲೇ ಚುನಾವಣಾಕಾಂಕ್ಷಿಗಳು ನಮಗೆ ತಿಳಿಸಿದ್ದರೆ ನಾವು ಪರ್ಯಾಯ ಮಾರ್ಗವನ್ನು ನಾವು ಹುಡುಕುತ್ತಿದ್ದೆವು. ಆದರೆ ಈಗ 3 ಗಂಟೆಯಾಗಿದೆ. ನಾಳೆ ಬೆಳಗ್ಗೆಯ ಹೊತ್ತಿಗೆ ಈಗ ಬಂದಿರುವ ಎಲ್ಲಾ ಅರ್ಜಿಗಳಿಗೆ ಬೇಬಾಕಿ ಪ್ರಮಾಣಪತ್ರವನ್ನು ನೀಡಬೇಕೆಂದು ಕಛೇರಿಯ ನೌಕರರನ್ನು ಕರೆಸಿ ಆದೇಶಿಸಿದರು.

      ನಗರದಲ್ಲಿ ಮೂಲಭೂತ ಸೌಕರ್ಯಗಳಲ್ಲಿದಿರುವುದು ಹಿಂದಿನ ಸದಸ್ಯರಿಗೆ ತಿಳಿದಿರಲಿಲ್ಲವೇ? ನಗರಸಭೆ ಆಯುಕ್ತರು : ನಗರಸಭೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆಯೆ ಎಂದು ಪ್ರಶ್ನಿಸಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಗರಸಭಾ ಆಯುಕ್ತರು, ನಗರಸಭೆಯಲ್ಲಿ ಮೂಲಭೂತ ಸೌಕರ್ಯವಿಲ್ಲದಿರುವುದು ಹಿಂದಿನ 5 ವರ್ಷ ಆಳ್ವಿಕೆಮಾಡಿದ ನಗರಸಭಾ ಸದಸ್ಯರಿಗೆ ತಿಳಿದಿರಲಿಲ್ಲವೆ, ಈಗ ಯು.ಪಿ.ಎಸ್ ಇಲ್ಲ, ಕಂಪ್ಯೂಟರ್ ಇಲ್ಲ, ಪ್ರಿಂಟರ್ ಇಲ್ಲವೆಂದು ಬೊಬ್ಬೊ ಹೊಡೆಯುವವರು ಹಿಂದಿನ ಸಭೆಗಳಲ್ಲಿ ಪ್ರಸ್ತಾಪಿಸಿ ಅನುಮೋದನೆ ಮಾಡಿ ಹಾಕಿಸಬಹುದಿತ್ತಲ್ಲವೆ?

       ಅವರು ಮಾಡದ್ದನ್ನು ಅವರು ಅಧಿಕಾರ ಕಳೆದುಕೊಂಡ ತಕ್ಷಣವೆ ನಾವೇಗೆ ಮಾಡುವುದು? ನಾವು ಎಸ್.ಡಿ.ಪಿ ಘಟಕಕ್ಕೆ ಒಂದು ಬೋರ್‍ವೆಲ್ ಹಾಕಿಸಿ ಎಂದು ಪ್ರಸ್ತಾಪಿಸಿದ್ದಕ್ಕೆ ಸದಸ್ಯರೆಲ್ಲರೂ ಅಲ್ಲಿ ಓಟು ಹಾಕುವವರಿಲ್ಲ ಅಲ್ಲಿಗೇಕೆ ಬೋರ್‍ವೆಲ್ ಎಂದು ಹೇಳಿದ್ದರು, ನಮ್ಮ ನಗರಸಭೆಯ ಸಿಬ್ಬಂದಿಗಳು ಈಗಲೂ ಮುರುಕಲು ಖುರ್ಚಿಗಳ ಮೇಲೆಯೆ ಕುಳಿತು ಕೆಲಸಮಾಡುತ್ತಿದ್ದಾರೆ. ನೀವು ಬೇಕಾದರೆ ನೋಡಿಕೊಂಡು, ಫೋಟೋ ತೆಗೆದುಕೊಂಡು ಹೋಗಿ ಎಂದು ಪತ್ರಕರ್ತರಿಗೆ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link