ತಿಪಟೂರು :

ಬೆಳಿಗ್ಗೆ ಸು 8 ಗಂಟೆಯ ಸಮಯದಲ್ಲಿ ಸು. 1 ವರ್ಷದ ಹೆಣ್ಣು ಮಗುವು ಬೀದಿಯಲ್ಲಿದೆ ಎಂದು ಸಾರ್ವಜನಿಕರು ಮಕ್ಕಳ ಸಹಾಯ ವಾಣಿ ಕಛೇರಿಗೆ ನೀಡಿದ ಮಾಹಿತಿ ಮೇರೆಗೆ ಸ್ಥಳ ಬೇಟಿ ಮಾಡಿ ಮಗುವನ್ನು ನಗರ ಠಾಣೆ ಸಿಬ್ಬಂದಿ ತಿಪಟೂರು & ಸಾರ್ವಜನಿಕರ ಸಹಕಾರ ಪಡೆದು ಮಗುವನ್ನು ರಕ್ಷಸಲಾಗಿದೆ.
ಸದರಿ ಮಗುವಿನ ಜೊತೆಯಲ್ಲಿ ತಾಯಿ ಎಂದು ಹೇಳಿದ ರಾಬೀಯಾ ಫಾತೀಮಾ ಸು. 30 ವರ್ಷ & ತಾತಾ ಎಂದು ಹೇಳಿದ ಅಬೀಬ್ ಎಂಬುವ ಇಬ್ಬರೂ ಮದ್ಯಪಾನಮತ್ತರಾಗಿದ್ದೂ, ರಸ್ತೆ ಬದಿಯಲ್ಲಿ ಅಮಲಿನಲ್ಲಿ ಮಲಗಿದ್ದೂ ಕಂಡು ಬಂತು. ಮಗುವು ರಸ್ತೆ ಮಧ್ಯದಲ್ಲಿ ಇದ್ದುದ್ದನ್ನು ಕಂಡ ಸಾರ್ವಜನಿಕರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದರು. ತಮ್ಮ ಊರು ಸುಭಷ್ ನಗರ ಗುಬ್ಬಿ ಎಂದು ತಿಳಿಸಿರುತ್ತಾರೆ.
ಸ್ಥಳೀಯವಾಗಿ ವಿಚಾರಿಸಲಾಗಿ ಯಾವುದೇ ಸಂಬಂಧಿಕರು ಪತ್ತೆಯಾಗದ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ತಾಯಿ & ತಾತ ಎಂದು ಹೇಳಿಕೊಂಡಿದ್ದದವರು ಮದ್ಯದ ಅಮಲಿನಲ್ಲಿದ್ದರಿಂದ ಮಂದಿನ ಪಾಲನೆ & ರಕ್ಷಣೆಗಾಗಿ ಹಾಗು ಮಂದಿನ ಕ್ರಮಕ್ಕಾಗಿ ಬಾಲ ನ್ಯಾಯ ಕಾಯ್ದೆ ಕಲಂ 32 ರಡಿ ಮಗುವನ್ನು ರಕ್ಷಸಿ ಮಕ್ಕಳ ಕಲ್ಯಾಣ ಸಮಿತಿ, ಸರ್ಕಾರಿ ಬಾಲಕಿಯರ ಬಾಲಮಂದಿರ ಕಛೇರಿ, ಕುಣಿಗಲ್ ರಸ್ತೆ, ತುಮಕೂರು . ಇಲ್ಲಿಗೆ ವರ್ಗಾಯಿಸಲಾಗಿದೆ. ಎಂದು ಬದುಕು ಮಕ್ಕಳ ಸಹಾಯವಾಣಿ ನಿರ್ದೇಶಕರ ಬಿ.ಎಸ್. ನಂದಕುಮಾರ್ ತಿಳಿಸಿದರು. ಮಗುವಿನ ರಕ್ಷಣೆ ಸಮಯದಲ್ಲಿ ಮಕ್ಕಳ ಕಲ್ಯಾಣ ಸಹಾಯವಾಣಿ ನಿರ್ದೇಶಕರ ಬಿ.ಎಸ್. ನಂದಕುಮಾರ್, ಸಿಬ್ಬಂದಿ ಶ್ರೀಮತಿ ಮಧು. ಶ್ರೀ ರವಿಶಂಕರ್, ನಗರ ಠಾಣಾ ಪೋಲಿಸ್ ಸಿಬ್ಬಂಧಿ ಹಾಜರಿದ್ದರು.
ಈ ಸಮಯದಲ್ಲಿ ಹತ್ತಾರು ಪೋಷಕರು ಮಗುವನ್ನು ನಾವು ಸಾಕುತ್ತೇವೆ ಎಂದು ಮಕ್ಕಳ ಸಹಾಯವಾಣಿ ಸಿಬ್ಬಂದಿಯೊಡನೆ ವಾಗ್ವಾದವನ್ನು ನಡೆಸಿದರು ಎಲ್ಲರಿಗೂ ಮನವರಿಕೆ ಮಾಡಿ, ಕಾನೂನಿ ಪ್ರಕಾರ ಪೋಷಕರಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟ ಯಾವುದೇ ಮಗುವನ್ನು ಬಾಲ ನ್ಯಾಯ ಕಾಯ್ದೆಯಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಬೇಕು ಎಂದು ಮನವರಿಕೆ ಮಾಡಲಾಯಿತು, ಅವರಿಗೆ ದತ್ತು ಪಡೆಯುವ ಆಸಕ್ತಿಯಿದ್ದವರು ಕೇಂದ್ರಸರ್ಕಾರದ ಮಾರ್ಗಸೂಚಿಯಂತೆ ನಿಯಮಾನುಸಾರ ನೋಂದಾವಣೆ ಮಾಡಲು ಮನವರಿಕೆ ಮಾಡಲಾಯಿತು.
ಜಿಲ್ಲಾ ಮಕ್ಕಳ ಕಲ್ಯಾಣಸಮಿತಿಯಲ್ಲಿ ಇಲ್ಲಿ ಬಾಲ ನ್ಯಾಯ ಕಾಯ್ದೆ 2015 ರಡಿ ನಿಯಮಾನುಸಾರ ಮಗುವಿನ ಸಂಬಂಧಿಕರ ಕೂಲಂಕೂಷ ಸಮಗ್ರ ವರದಿ ಆಧರಿಸಿ ಮಗುವಿನ ಹಿತದೃಷ್ಟಿಯಿಂದ ಮಂದಿನ ಕ್ರಮ ವಹಿಸಲಾಗುವುದು ಎಂದು & ಈ ಸಮಯದಲ್ಲಿ ಸಾರ್ವಜನಿಕರ ಸಹಕಾರ & ಸ್ಪಂದನೆಗೆ ಬದುಕು ಸಂಸ್ಥೆ ನಿರ್ದೇಶಕ & ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಆದ ಬಿ.ಎಸ್. ನಂದಕುಮಾರ್ ಧನ್ಯವಾದಗಳನ್ನು ಅರ್ಪಿಸಿ ಸದರಿ ಮಗುವಿಗೆ ಸಂಬಂಧಪಟ್ಟ ಸ್ವಾಭಾವಿಕ ತಂದೆ ತಾಯಿಗಳು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಲು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
