ಹೊನ್ನಾಳಿ:
ತಾಲೂಕಿನ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಹುಂಡಿ ಒಡೆದು ಬುಧವಾರ ಎಣಿಕೆ ಕಾರ್ಯ ನಡೆಸಲಾಯಿತು. ಎಣಿಕೆ ಕಾರ್ಯ ಬೆಳಿಗ್ಗೆ 10ರಿಂದ ಪ್ರಾರಂಭವಾಗಿ ಸಂಜೆವರೆಗೂ ಮುಂದುವರಿದಿತ್ತು.ಎಣಿಕೆ ಕಾರ್ಯದ ನೇತೃತ್ವವನ್ನು ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಜಿ. ಜಯರಾಮ್ ವಹಿಸಿದ್ದರು.
ಹುಂಡಿಯಲ್ಲಿ ರೂ.1, 5, 10, 20, 50, 100, 200, 500 ಹಾಗೂ 2000 ನೋಟುಗಳೊಂದಿಗೆ ಬೆಳ್ಳಿ, ಚಿನ್ನದ ಆಭರಣಗಳು ಹಾಗೂ ದೇವರಲ್ಲಿ ಹಲವು ಬೇಡಿಕೆ-ಮನವಿ ಪತ್ರಗಳು ಇದ್ದದ್ದು ಕಂಡುಬಂತು.ಕಂದಾಯ ಇಲಾಖೆ ಹಾಗೂ ಹೊನ್ನಾಳಿಯ ಕೆನರಾ ಬ್ಯಾಂಕ್ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. ಶ್ರೀ ಹಳದಮ್ಮ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಮಲ್ಲಿಕಾರ್ಜುನ್ ಹಾಗೂ ಗ್ರಾಮದ ಮುಖಂಡರು ಇದ್ದರು.
ಮಾರಿಕೊಪ್ಪ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, “ಬಿ” ಶ್ರೇಣಿಯ ಮುಜರಾಯಿ ದೇವಸ್ಥಾನ ಇದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
