ತಿಪಟೂರು
ಕಾಂಗ್ರೆಸ್ 14, ಬಿ.ಜೆ.ಪಿ 7, ಜೆ.ಡಿ.ಎಸ್ 16 ಮತ್ತು ಹೆಚ್ಚಾಗಿ ಪಕ್ಷೇತರರು 29 ಒಟ್ಟು 66
ನಗರಸಭೆ ಚುನಾವಣೆ ಚುರುಕುಗೊಂಡು 66 ನಾಮಪತ್ರಗಳು ಸಲ್ಲಿಕೆಯಾಗಿದ್ದು ಇಂದು ಸುಮಾರು 150 ಜನ ನಾಮಪತ್ರಸಲ್ಲಿಸುವ ನಿರೀಕ್ಷೆಯಿದೆ.
ಮಂಗಳವಾರದಂದು ನಾಮಪತ್ರಸಲ್ಲಿಕೆಗೆ ಅಭ್ಯರ್ಥಿಗಳು ಸಲ್ಲಿಸಲು ಮುಂದೆಬರಲಿಲ್ಲ. ಆದರೆ ಬುಧವಾರ ಜಡಿಮಳೆಯಂತೆ ನಿರಂತರವಾಗಿ ಬೆಳಗ್ಗೆಯಿಂದಲೇ ನಾಮಪತ್ರಸಲ್ಲಿಸಲು ಬರುತ್ತಲೆ ಇದ್ದರು. ನಿನ್ನೆ ಮಧ್ಯಾಹ್ನ 3 ಗಂಟೆಗೆ ಸಮಯ ಮುಗಿದರೂ ಅಧಿಕಾರಿಗಳು 3 ಗಂಟೆಯೊಳಗೆ ಬಂದವರಿಗೆ ಟೋಕನ್ ನಂಬರ್ ಕೊಟ್ಟು ಸಂಜೆ ಸುಮಾರು 5 ಗಂಟೆಯವರೆಗೂ ನಾಮಪತ್ರ ಸ್ವೀಕರಿಸಿದರು. ನಿನ್ನೆ ಸಲ್ಲಿಕೆಯಾದ ನಾಮಪತ್ರಗಳಲ್ಲಿ ಕಾಂಗ್ರೆಸ್ 14, ಬಿ.ಜೆ.ಪಿ 7, ಜೆ.ಡಿ.ಎಸ್ 16 ಮತ್ತು ಹೆಚ್ಚಾಗಿ ಪಕ್ಷೇತರರು 29 ಒಟ್ಟು 66 ಅಭ್ಯರ್ಥಿಗಳು ನಗರಸಭೆ ಪ್ರವೇಶಿಸಲು ನಾಮಪತ್ರವನ್ನು ಸಲ್ಲಿಸಿದ್ದಾರೆ.