ಹೊಸದಿಲ್ಲಿ :
2019ರ ಪ್ರಸಕ್ತ ವರ್ಷದ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯಾದ ಸಿಟಿಇಟಿಯಲ್ಲಿ ಆರ್ಥಿಕ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿ ಒದಗಿಸಬೇಕೆಂಬ ಕೋರಿಕೆಗೆ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಗುರುವಾರ ಕೇಂದ್ರ ಮತ್ತು ಸಿಬಿಎಸ್ಇ ಗೆ ನೊಟೀಸ್ ಜಾರಿ ಮಾಡಿದೆ.
ನ್ಯಾ.ಇಂದಿರಾ ಬ್ಯಾನರ್ಜಿ ಮತ್ತು ನ್ಯಾ. ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠವು ಕೇಂದ್ರ ಸರ್ಕಾರ ಮತ್ತು ಸಿಬಿಎಸ್ಇ ಗೆ ನೋಟೀಸ್ ನೀಡಿ ಮುಂದಿನ ವಿಚಾರಣಾ ದಿನಾಂಕದೊಳಗೆ ಉತ್ತರಿಸುವಂತೆ ತಾಕೀತು ಮಾಡಿದೆ.
ಆರ್ಥಿಕವಾಗಿ ದುರ್ಬಲರಿರುವ ವರ್ಗದ ಮತ್ತು 2019ರ ಸಿಟಿಇಟಿ ಪರೀಕ್ಷೆ ಬರೆಯುಲು ಉತ್ಸುಕರಾಗಿರುವ ಕೆಲವು ಅರ್ಜಿದಾರರು ಶೇ.10ರ ಮೀಸಲಾತಿ ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದರು.