ಪಣಜಿ:
ರಜಾ ದಿನ ಕಳೆಯಲು ಗೋವಾ ಬೀಚ್ಗೆ ಬಂದಿದ್ದ ಆಂಧ್ರ ಮೂಲದ ವೈದ್ಯೆಯೊಬ್ಬರು ಸಮುದ್ರದ ಅಲೆಗಳ ನಡುವೆ ಸಿಕ್ಕಿ ಕೊಚ್ಚಿ ಹೋದ ಘಟನೆ ಗೋವಾದಲ್ಲಿ ನಡೆದಿದೆ. ಸಾವನ್ನಪ್ಪಿದ ಯುವತಿಯನ್ನು ರಮ್ಯಾಕೃಷ್ಣ ಎಂದು ಗುರುತಿಸಲಾಗಿದೆ ಇವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮೂಲದವರಾಗಿದ್ದಾರೆ ಎಂದು ಗುರುತಿಸಲಾಗಿದೆ.
ರಮ್ಯಾ ಅವರು ತಮ್ಮ ಮೂವರು ಗೆಳತಿಯರೊಂದಿಗೆ ಗೋವಾ ಬೀಚ್ಗೆ ತೆರಳಿದ್ದು, ಸಮುದ್ರದ ಬಳಿ ಸೆಲ್ಫಿ ಕಿಕ್ಲಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಂತದಲ್ಲಿ ಭಾರೀ ಗಾತ್ರದ ಅಲೆ ದಡಕ್ಕೆ ಅಪ್ಪಳಿಸಿದ್ದು, ಕೂಡಲೇ ಮೂವರು ಗೆಳತಿಯರು ಅಲೆಯೊಂದಿಗೆ ಸಮುದ್ರಕ್ಕೆ ಕೊಚ್ಚಿ ಹೋಗಿದ್ದಾರೆ. ಘಟನೆಯಲ್ಲಿ ಇಬ್ಬರು ಯುವತಿಯರು ದಡಕ್ಕೆ ಮರಳಿ ಬರಲು ಯಶಸ್ವಿಯಾದರೆ ರಮ್ಯಾಕೃಷ್ಣ ಮಾತ್ರ ಕಾಣೆಯಾಗಿದ್ದರು ಮತ್ತು ಕೆಲ ಸಮಯದ ನಂತರದಲ್ಲಿ ಅವರ ಮೃತದೇಹ ತೇಲಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








