ಅಂದು ‘ದಂಡು ಪಾಳ್ಯ’ ಸಿನಿಮಾದಲ್ಲಿ ನಿರ್ಭಯವಾಗಿ ಅಭಿನಯಿಸಿದ್ದವರು ಪೂಜಾ ಗಾಂಧಿ. ಈಗ ಪೂಜಾ ಗಾಂಧಿ ‘ಸಂಹಾರಿಣಿ’ ಎಂಬ ಸಾಹಸ ಪ್ರಧಾನ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಚಿತ್ರದ ಚಿತ್ರೀಕರಣವೀಗ ಸಂಪೂರ್ಣಗೊಂಡಿದೆ.
2 ಎಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ, ಕೆ.ವಿ.ಶಭರೀಶ್ ನಿರ್ಮಾಣ ಮಾಡಿರುವ, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ಕೆ ಜವಾಹರ್ ನಿರ್ದೇಶನ ಮಾಡಿದ್ದಾರೆ.
ಬಾಲಿವುಡ್ ಸಿನಿಮಾಗಳ ಪ್ರಸಿದ್ದ ಖಳ ನಟ ರಾಹುಲ್ ದೇವ್, ರವಿ ಕಾಳೆ, ಹ್ಯಾರಿ ಜೋಶ್ ಈ ಚಿತ್ರದಲ್ಲಿ ಖಳನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ನಟ ಕಿಶೋರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಹಾಗೂ ಅರುಣ್ ಪೋಷಕ ಕಲಾವಿದರುಗಳಾಗಿ ಅಭಿನಯಿಸಿದ್ದಾರೆ.
ಮಾಸ್ ಮಾದ ಸಾಹಸ, ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ಅಖಿಲ್ ಸಂಕಲನ, ವಿ 2 ಸಂಗೀತ ನಿರ್ದೇಶನ, ರಾಜೇಶ್ ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಗಂಗಾಧರ್ ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ಪ್ರಚಾರ ಕಲೆ ಲಕ್ಕಿ, ಸ್ಥಿರ ಛಾಯಾಗ್ರಹಣ ಸುರೇಶ್ ಮೆರ್ಲಿನ್ ಅವರು ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ