ತಿಪಟೂರು:
ನಗರಸಭೆ ಚುನಾವಣೆಯಲ್ಲಿ ಗದ್ದುಗೆಹಿಡಿಯಲು 31 ವಾರ್ಡ್ಗಳಿಂದ ಒಟ್ಟು 171 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಅವುಗಳಲ್ಲಿ 141 ಅಭ್ಯರ್ಥಿಗಳ ನಾಮಪತ್ರಗಳು ಕ್ರಮದ್ದವಾಗಿದ್ದು 30 ನಾಮಪತ್ರಗಳು ತಿರಸ್ಕತಗೊಂಡಿವೆ. ಅಂತಿಮವಾಗಿ ಅಖಾಡದಲ್ಲಿ 141 ಸ್ಫರ್ಧಿಗಳಿದ್ದು, ಮೇ 20ಕ್ಕೆ ನಾಮಪತ್ರ ಹಿಂಪಡೆಯಲು ಸಮಯವಿದ್ದು ಯಾರ್ಯಾರು ನಾಮಪತ್ರ ಹಿಂಪಡೆದು ಸ್ಪರ್ಧೆಯಿಂದ ಹಿಂದೆಸರಿಯುತ್ತಾರೋ ಕಾಯ್ದು ನೋಡಬೇಕಿದೆ.
ನಗರಸಭಾ ಚುನಾವಣೆಗೆ ಅಂತಿಮವಾಗಿ ವಾರ್ಡ್ ನಂ 9 ಗೋವಿನಪುರ ಮತ್ತು ವಾರ್ಡ್ ನಂ 22 ಚಾಮುಂಡೇಶ್ವರಿ ಬಡಾವಣೆ ಮತ್ತು ಇಪ್ಪೆತೋಪಿನಲ್ಲಿ ನವಗ್ರಹಗಳಂತೆ 9 ಜನರು ಅಂತಿಮ ಕಣದಲ್ಲಿದ್ದಾರೆ. ಇನ್ನು ವಾರ್ಡ್ ನಂ 1, ವಾರ್ಡ್ ನಂ 6 ಮತ್ತು 7 ರಲ್ಲಿ ತಲಾ ಇಬ್ಬರು ಸ್ಪರ್ಧಿಗಳಿದ್ದು ನೇರ ಹಣಾಹಣಿ ಏರ್ಪಟ್ಟಿದೆ.