ದಾವಣಗೆರೆ:
ಆಹಾರ ಮತ್ತು ಪಾನೀಯಗಳ ತಯಾರಿಕೆಯಲ್ಲಿ ಜಗತ್ತಿನಾದ್ಯಂತ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿನ ಪದವೀಧರರಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಜಿ. ಎಂ. ಆಗ್ರೊ ಅಂಡ್ ಬೆವರೇಜಸ್ (ಇಂಡಿಯಾ) ಪ್ರೈ ಲಿಮಿಟೆಡ್‍ನ ಪ್ಲಾಂಟ್ ಹೆಡ್ ಟಿ. ಹರಿಹರನ್ ತಿಳಿಸಿದರು.
ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ “ಜೆನಿಲಿಕ್ಸ್” ಫೋರಂನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಹಾರ ಮತ್ತು ಪಾನೀಯಗಳನ್ನು ಉತ್ಪಾದಿಸುವ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಪದವೀಧರ ಯುವಕರಿಗೆ ಸಾಕಷ್ಟು ಬೇಡಿಕೆವಿದ್ದು, ಪದವೀಧರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಪ್ರಕಾಶ್ ಮಾತನಾಡಿ, ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಸಲಹೆ ನೀಡಿದರು.ಉಪ ಪ್ರಾಂಶುಪಾಲ ಡಾ.ಬಿ.ಆರ್.ಶ್ರೀಧರ್, ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಆದ ಪ್ರಗತಿಯನ್ನು ಸ್ಮರಿಸುತ್ತಾ ಹಳೆಯ ವಿದ್ಯಾರ್ಥಿಗಳ ಸಾಧನೆಯನ್ನು ವಿವರಿಸಿದರು.
ವಿಭಾಗದ ಮುಖ್ಯಸ್ಥ ಡಾ.ಹೆಚ್.ಗುರುಮೂರ್ತಿ, ಕಾರ್ಯಕ್ರಮದ ಸಂಚಾಲಕ ರಾಕೇಶ್ ಎನ್ ಆರ್ ಮಾತನಾಡಿದರು. ಮೇಘನ ಎಂ ನಿರೂಪಿಸಿದರು. ಪೂಜ ಜಿ.ವಿ ಪ್ರಾರ್ಥಿಸಿದರು. ಮೋನಿಷ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು, ಸಹನಾ ಪಿ ಕೌಶಿಕ್ ಸ್ವಾಗತಿಸಿದರು. ಭರತ್ ಜಿ.ಬಿ ವಂದಿಸಿದರು.