ಹೆಜ್ಜೇನು ದಾಳಿ: 30 ಜನಕ್ಕೆ ಗಾಯ

ಮಧುಗಿರಿ :

     ಚೌಲಕರ್ಮಕ್ಕಾಗಿ ತೆರಳಿದ್ದವರ ಮೇಲೆ ಹೆಜ್ಜೇನು ಹುಳುಗಳು ಏಕಾ-ಏಕಿ ದಾಳಿ ನಡೆಸಿ ಸುಮಾರು 30ಕ್ಕೂ ಹೆಚ್ಚು ಜನರು ಗಾಯಗೊಂಡು ಮತ್ತಿಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

     ತಾಲ್ಲೂಕಿನ ಕಸಬ ಹೋಬಳಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಓಬಳ ನರಸಿಂಹಸ್ವಾಮಿ ದೇವಾಲಯದಲ್ಲಿ ತಾಲ್ಲೂಕಿನ ವಜ್ರದಹಳ್ಳಿ ಗ್ರಾಮದವರಿಂದ ಶನಿವಾರ ಚೌಲಕರ್ಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೇವಾಲಯದ ಸಮೀಪವಿರುವ ಮರದ ಕೆಳೆಗೆ ದೇವರಿಗೆ ಪೊಜೆ ಮಾಡುವಾಗ ದೂಪ ಹಚ್ಚಿದ ಸಂಧರ್ಭದಲ್ಲಿ ಹೊಗೆಯು ಹೆಚ್ಚಾಗಿ ಮರದಲ್ಲಿದ್ದ ಹೆಜ್ಜೇನು ಹುಳುಗಳು ಏದ್ದು ದಾಳಿ ನಡೆಸಿವೆ.

      ಜೇನು ಹುಳುಗಳ ದಾಳಿಯಿಂದಾಗಿ ತಪ್ಪಿಸಿಕೊಳ್ಳಲು ಪೂಜೆಯಲ್ಲಿ ತಲ್ಲೀನರಾಗಿದ್ದವರು ಗಾಬರಿಯಿಂದ ದಿಕ್ಕಾಪಾಲಾಗಿ ಓಡಿದರೂ ಕೂಡ ಜೇನು ಹುಳುಗಳು ಅವರನ್ನು ಹಿಂಬಾಲಿಸಿ ಗಾಯಗೊಳಿಸಿವೆ, ವಿಷಯ ತಿಳಿದ ಅಕ್ಕ ಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ರಕ್ಷಿಸುವ ಜೊತೆಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೆ ನೆರವಾಗಿದ್ದಾರೆ.

      ಜೇನು ಹುಳುಗಳ ಧಾಳಿಗೆ ಒಳಗಾದವರು ಮಹಲಿಂಗಪ್ಪ, ಭೋಜರಾಜು, ಹನುಮಂತರಾಯಪ್ಪ, ಧನುಶ್, ವಿನೋಧ, ಲೋಕೆಶ್, ರಾಮಣ್ಣ,  ಮಾನ್ಯ, ಪಟ್ಟಕ್ಕ, ಪುಟ್ಟಸ್ವಾಮಿ, ಸರೋಜಮ್ಮ ಮಾರಪ್ಪ, ಲಕ್ಷ್ಮಮ್ಮ, ಪುಟ್ಟಮ್ಮ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಮತ್ತಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link