ಮಧುಗಿರಿ:
ತಾಲ್ಲೂಕಿನ ಬಹುಷ ಎಲ್ಲಾ ಕೆರೆಗಳು ಬತ್ತಿ ಹೋಗಿ ಪ್ರತಿ ಗ್ರಾಮದಲ್ಲೂ ಎಲ್ಲಾ ನೀರಿನ ಸಮಸ್ಯೆ ತಲೆದೋರಿದ್ದು ಜನ ಜಾನುವಾರುಗಳು ನೀರಿಗಾಗಿ ಪರಿದಾಡುತ್ತಿದ್ದರೆ ಪಟ್ಟಣದ ದೊಡ್ಡಪೇಟೆಯ ಕೈಪಂಪ್ ನಲ್ಲಿ ಕಳೆದ 20 ವರ್ಷಗಳಿಂದ ಬತ್ತದೆ ನಾಗರೀಕರ ನೀರಿನ ದಾಹ ನೀಗಿಸುತ್ತಿದ್ದು ಇದೀಗ ದುರಸ್ಥಿಗೆ ಬರಲಾರಂಭಿಸಿದ್ದು ರೀಪೇರಿ ಮಾಡುವಂತೆ ನಾಗರೀಕರು ಒತ್ತಾಯಿಸಿದ್ದಾರೆ.
ದೊಡ್ಡಪೇಟೆ, ಬಸವನಗುಡಿ ಬೀದಿ, ಹಳೇ ತಾಲ್ಲೂಕು ರಸ್ತೆ, ನಾಯಕರ ಹಟ್ಟಿ ಸೇರಿದಂತೆ ಸುತ್ತಮುತ್ತಲ ವಾರ್ಡಿನ ನಾಗರೀಕರಿಗೆ ದೊಡ್ಡಪೇಟೆ ಮುಖ್ಯ ರಸ್ತೆಯಲ್ಲಿರುವ ಕೈಪಂಪ್ ಸುಮಾರು 20 ವರ್ಷಗಳಿಂದ ಹಗಲಿರುಳೆನ್ನದೆ ನಾಗರೀಕರ ಬಳಕೆಗೆ ನೀರನ್ನು ಒದಗಿಸುತ್ತಿದೆ.
ಈ ಕೈಪಂಪ್ನ ಮುಂದೆ ಅದೆಷ್ಟೂ ಕೊಳವೆ ಬಾವಿಗಳನ್ನು ಅಧಿಕಾರಿಗಳು ಕೊರೆಸಿದರು ಕೆಲ ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋದವು ಆದರೂ ಸಹ ಈ ಕೈಪಂಪ್ ಮಾತ್ರ ನಾಗರೀಕರಿಗೆ ತನ್ನ ಸೇವೆಯನ್ನು ಒದಗಿಸಿ ಕೊಡುವುದರಲ್ಲಿ ಈಗಲೂ ಮುಂದಿದೆ.
ಈ ಕೈಪಂಪ್ನ್ನು ಕೊರೆಸಿ ಇಪ್ಪತ್ತು ವರ್ಷಗಳೆ ಕಳೆದಿದೆ ಕಾಲ ಕ್ರಮೇಣವೆಂಬಂತೆ ಕೈಪೂಂಪ್ನ ಒಳ ಭಾಗದಲ್ಲಿರುವ ಪೈಪ್ಗಳು ತುಕ್ಕು ಹಿಡಿದಿವೆ ಕೆಲ ಪೈಪ್ಗಳನ್ನು ಬದಲಾಯಿಸಿದರೆ ನೀರು ಮತ್ತಷ್ಟೂ ಬರುತ್ತದೆ ಈ ಬರಗಾಲದಲ್ಲೂ ನೀರನ್ನು ನೀಡುತ್ತೀರುವುದರಿಂದ ಸ್ವಲ್ಪ ಮಟ್ಟಿನ ಬಳಕೆ ನೀರಿನ ಅಭಾವ ಕಡಿಮೆ ಇದೆ ಎಂಬುದು ವಾರ್ಡಿನ ಹಿರಿಯ ನಾಗರೀಕರ ಅಭಿಪ್ರಾಯವಾಗಿದೆ.
ಕೈಪಂಪ್ನ್ನು ರೀಪೇರಿ ಮಾಡಿಸುವಂತೆ ಹಲವಾರು ವಾರ್ಡಿನ ಪುರಸಭಾ ಸದಸ್ಯರ ಗಮನಕ್ಕೆ ತರಲಾಗಿದೆ ಆದರೂ ಅವರು ಇದೂವರೆವಿಗೂ ದುರಸ್ಥಿಗೆ ಮುಂದಾಗಿಲ್ಲ ಯಾವುದೇ ಪ್ರಯೋಜನ ಕಂಡಿಲ್ಲ ಇನ್ನಾದರೂ ಸಂಭಂಧಪಟ್ಟವರು ಎಚ್ಚೆತ್ತು ಕೊಂಡು ಹಳೆಯ ಕೈ ಬೋರ್ನ ದುರಸ್ಥಿಗೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡ ಬೇಕಾಗಿದೆ.
ವಾರ್ಡಿನ ನಾಗರೀಕ ಕಾಮರಾಜು ಮಾತನಾಡಿ ನಾವು ಮತ್ತು ಸ್ನೇಹಿತರ ಕುಟುಂಬ ವರ್ಗದವರು ಮೊದಲಿನಿಂದಲೂ ಇದೇ ನೀರನ್ನು ಬಳಕೆಗೆ ಮಾತ್ರ ಬಳಸುತ್ತಿದ್ದೆವೆ ಯಾವತ್ತೂ ಒತ್ತಿಲ್ಲ ಕೈ ಬೋರ್ ಹಳೆಯದಾಗಿದೆ ಅಷ್ಟೆ ಈಗ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ ಒಳಗಿನ ಪೈಪ್ ಗಳನ್ನು ಬದಲಾಯಿಸಿ ರೀಪೇರಿ ಮಾಡಿದರೆ ಒಳಿತು.
ಮುಸ್ಲಿಂ ಸಮೂದಾಯದವರೆ ಹೆಚ್ಚಿರುವ ವಾರ್ಡ್ ನಂ1 ರಲ್ಲಿ ಇತ್ತೀಚೆಗಷ್ಟೆ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸುಮಾರು 960 ಅಡಿ ಆಳದಷ್ಟು ಕೊಳವೆ ಬಾವಿಯೊಂದನ್ನು ಕೊರೆಸಿದ್ದು ಆ ಕೊಳವೆ ಬಾವಿಗೆ ಹೊಸದಾಗಿ ಪಂಪ್ ಮತ್ತು ಮೋಟಾರ್ ಆಳವಡಿಸಲಾಗಿದೆ ಆದರೆ ಒಂದೂ ದಿನಕ್ಕಾದರೂ ಈ ಬೋರ್ ವೆಲ್ ನಿಂದ ನೀರು ಮನೆಗಳಿಗೆ ಹರಿದಿಲ್ಲ.
ಎರಡು ಮೋರಿಗಳ ಪಕ್ಕದಲ್ಲಿಯೇ ಈ ಕೊಳವೆ ಬಾವಿಯನ್ನು ಕೊರೆದಿದ್ದರಿಂದ ಆ ನೀರು ಕೊಳವೆ ಬಾವಿಗೆ ಹರಿದಿದೆ ಒಳ ಭಾಗದಿಂದ ಬಂದಂತಹ ನೀರನ್ನೇ ಚೀತ್ರೀಕರಿಸಿ ಕೊಂಡು ಹೊಸ ಪಂಪ್ ಮೋಟಾರ್ ಆಳವಡಿಸಿ ಗುತ್ತಿಗೆದಾರ ಮತ್ತು ಅಧಿಕಾರಿಗಳು ಬಿಲ್ ಮಾಡಿಕೊಳ್ಳುವ ಸಂಚು ರೂಪಿಸಿ ಸರಕಾರದ ಹಣವನ್ನು ಪೋಲು ಮಾಡಲು ಹೊರಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗುತ್ತಿಗೆದಾರ ಅಖಿಲೇಶ್ ಮಾತನಾಡಿ ಆರು ತಿಂಗಳ ಹಿಂದೆ ಬೋರ್ ವೆಲ್ ಕೊರೆಸಿದಾಗ ನೀರು ಇತ್ತು ಆದರೆ ಈಗಿನ ಪರಿಸ್ಥಿತಿ ತಿಳಿದಿಲ್ಲ ಅಲ್ಲಿನ ಬೋರ್ ವೆಲ್ಗೆ ವಿದ್ಯುತ್ ಸಂಪರ್ಕ ಸಹ ನೀಡಿಲ್ಲ ಸಂಪರ್ಕವಾದ ನಂತರ ಪುರಸಭೆಗೆ ಬೋರ್ ವೆಲ್ನ್ನು ಹಸ್ತಾಂತರಿಸಿದರೆ ಮಾತ್ರ ನಮಗೆ ಬಿಲ್ ನೀಡಲಾಗುತ್ತದೆ ಇದೂವರೆವಿಗೂ ಯಾವುದೇ ಬಿಲ್ ಕೂಡ ಆಗಿಲ್ಲ.
ಪಟ್ಟಣದ ಕೆಲ ವಾರ್ಡ್ ಗಳಲ್ಲಿನ ಕೊಳವೆ ಬಾವಿಗಳು ಮೋಟಾರ್ ಪಂಪ್ ಇಲ್ಲದೆ ಸೋರುಗುತ್ತಿವೆ ಅಂತಹ ಭಾಗದಲ್ಲಿಯಾದರೂ ಇಂತಹ ಪಂಪ್ ಮೋಟಾರ್ ಆಳವಡಿಸಿ ನೀರು ಹರಿಸ ಬಹುದಲ್ಲಾವೆ ನೀರಿನ ಭವಣೆಯನ್ನು ನೀಗಿಸ ಬಹುದಲ್ಲಾವೆ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.