ಪುರಸಭೆ ಚುನಾವಣೆ : ಮುಖಂಡರು ಕಾಂಗ್ರೆಸ್ ಅಭ್ಯರ್ಥಿಗಳ ಸಭೆ

ಹರಪನಹಳ್ಳಿ

       ಒಗ್ಗಟ್ಟಿನಿಂದ ಕಾಂಗ್ರೆಸಿನ ಎಲ್ಲಾ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಶ್ರಮಿಸಿದರೆ ಸ್ವ ಸಾರ್ಮಥ್ಯದಿಂದ ಬಹುಮತ ಪಡೆದು ಪುರಸಭೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮುಜರಾಯಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ್ ಕಿವಿಮಾತು ಹೇಳಿದರು.

       ಪಟ್ಟಣದ ಸಚಿವರ ನಿವಾಸದಲ್ಲಿ ಭಾನುವಾರ ನಡೆದ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ವಾರ್ಡ್‍ಗಳಿಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಮೇಲೆ ಅಯಾ ವಾರ್ಡ್‍ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಎಲ್ಲಾರ ಮನ ಒಲಿಸಿ ಮತಪಡೆಯಲು ಯಶಸ್ಸು ಸಾಧಿಸಬೇಕು. ಅಕ್ಕಪಕ್ಕದ ವಾರ್ಡ್‍ಗಳ ಅಭ್ಯರ್ಥಿಗಳಿಗೂ ಸಹಕಾರ ನೀಡಿ ಪಕ್ಷ ಬಹುಮತ ಸಾಧಿಸಲು ಶ್ರಮಿಸಬೇಕೆ ಎಂದು ಕರೆ ನೀಡಿದರು.

     ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಭಟ್ ಮಾತನಾಡಿ, 134 ವರ್ಷಗಳ ಇತಿಹಾಸ ವಿರುವ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಒದಗಿಸುವ ಮಹತನ್ನು ಉಳಿಸಿಕೊಂಡಿದೆ. ಈ ಪಕ್ಷದಿಂದ ಟಿಕೇಟ್ ಪಡೆಯುವುದೇ ಒಂದು ಘನತೆ. ಅದರ ಮಹತ್ವ ಅರಿತು ಅಯಾ ವಾರ್ಡ್‍ಗಳ ಪ್ರತಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬ ಮತದಾರರ ಮನ ಮುಟ್ಟುವಂತೆ ಮತಯಾಚನೆ ಮಾಡಿ ಗೆಲವು ಸಾಧಿಸಬೇಕು. ಮತ್ತೆ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ವಂತ ಬಲದಿಂದ ಬಹುಮತ ಪಡೆದು ಅಧಿಕಾರ ಸಾಧಿಸಲು ಪ್ರತಿ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಒಂದಾಗಿ ಮತಯಾಚನೆ ಮಾಡಿ ಎಂದು ಸಲಹೆ ನೀಡಿದರು.

      ಪುರಸಭೆ ಮಾಜಿ ಅಧ್ಯಕ್ಷ ಎಂ.ರಾಜಶೇಖರ ಮಾತನಾಡಿ, ಕಾಂಗ್ರೆಸ್ ಪಕ್ಷ ಸ್ವಂತ ಬಲದಿಂದ ಪುರಸಭೆಯಲ್ಲಿ ಅಧಿಕಾರ ನಡೆಸಬೇಕಾದರೆ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಬೇಕು. ಇದರಿಂದ ಪಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ಸಾಧಿಸಲು ಸುಲಭವಾಗುತ್ತದೆ.

      ಪಕ್ಷದ ಘನತೆಯೂ ಹೆಚ್ಚುತ್ತದೆ. ಈ ಬಾರಿ ಪುರಸಭೆ ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವಿಲ್ಲ ಆದ್ದರಿಂದ ಪ್ರತಿ ಅಭ್ಯರ್ಥಿ ಗೆಲವು ಸಾಧಿಸಲು ಪಕ್ಷದ ಮುಖಂಡರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು.ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಬೇಲೂರು ಅಂಜಪ್ಪ, ಮುಖಂಡರಾದ ಶಶಿಧರ ಪೂಜಾರ, ಜಾವೀದ್, ಸಿ.ಮರಿಯಪ್ಪ, ಇಜಾರಿ ಮಹಾವೀರ, ಹೆಚ್.ಕೆ.ಹಾಲೇಶ್ ಹಾಗೂ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap