ನಿಮಗೆ ಶಾಸಕರ ರಾಜಿನಾಮೆ ಕೇಳುವ ಯಾವುದೇ ನೈತಿಕತೆ ಇಲ್ಲ : ವಿ.ಟಿ.ವೆಂಕಟರಾಮ್

ತುರುವೇಕೆರೆ:

      ಕನಿಷ್ಟ ಗ್ರಾಮ ಪಂಚಾಯತ್ ಚುನಾವಣೆಗೂ ಸ್ಪರ್ದಿಸಲಾಗದ ದೊಡ್ಡಾಘಟ್ಟ ಚಂದ್ರೇಶ್‍ ರವರೇ ಶಾಸಕ ಮಸಾಲ ಜಯರಾಮ್‍ ರವರ ರಾಜೀನಾಮೆಗೆ ಒತ್ತಾಯಿಸುವ ಯಾವುದೇ ನೈತಿಕತೆ ನಿಮಗಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹಾಗೂ ಎ..ಪಿ.ಎಂ.ಸಿ. ನಿರ್ದೇಶಕ ವಿ.ಟಿ.ವೆಂಕಟರಾಮ್ ತಿರುಗೇಟು ನೀಡಿದರು.

      ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಾನುವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಮತದಾರರು ಮಸಾಲಜಯರಾಮ್‍ರವರನ್ನು 5 ವರ್ಷದ ಅವಧಿಗೆ ಶಾಸಕರಾಗಿ ಆಡಳಿತ ನೀಡಿ ಎಂದು ಆಶೀರ್ವದಿಸಿದ್ದಾರೆ. ಶಾಸಕ ಮಸಾಲಜಯರಾಮ್ ಬಗ್ಗೆ ಮಾತನಾಡಲು ಮುಂದಾಗಿರುವ ಚಂದ್ರೇಶ್ ಜನತೆಯಿಂದ ಆರಿಸಿ ಬಂದವರಲ್ಲ. .ಜನತೆಯಿಂದ ಆರಿಸಿ ಬಂದು ಜನಪ್ರತಿನಿಧಿ ಎನಿಸಿದ ಮೇಲೆ ಚಂದ್ರೇಶ್ ಶಾಸಕರ, ಜನಪ್ರತಿನಿಧಿಗಳ ಬಗ್ಗೆ ತುಟಿ ಬಿಚ್ಚಲಿ. ಅಲ್ಲಿಯವರೆಗೂ ನಿಮ್ಮ ಹಗುರವಾದ ಮಾತುಗಳಿಗೆ ಲಗಾಮು ಹಾಕಿ ಎಂದು ಸಲಹೆ ನೀಡಿದರು.

     ಮುಖಂಡ ನಾಗಲಾಪುರ ಮಂಜಣ್ಣ ಮಾತನಾಡಿ ಶಾಸಕ ಮಸಾಲಜಯರಾಮ್‍ರವರ ಕಾರ್ಯವೈಖರಿಯ ಬಗ್ಗೆ ಚಂದ್ರೇಶ್ ಅರಿವಿಲ್ಲದೇ ಮಾತನಾಡುತ್ತಿದ್ದಾರೆ. ತಾಲೂಕಿನ ಆಡಳಿತ ಕುಸಿದಿದೆ, ಶಾಸಕರು ಅಸಮರ್ಥರು ಎಂದೆಲ್ಲ ನಾಲಿಗೆ ಹರಿಯ ಬಿಡುತ್ತಿದ್ದಾರೆ. ಮುಖಂಡನ ಸೋಗು ಹಾಕಿಕೊಂಡು ಶಾಸಕರ ಬಗ್ಗೆ ಮಾತನಾಡುವ ಮುನ್ನ ನೀವು ಯಾರೆಂದು ತಿಳಿದುಕೊಳ್ಳಿ. ಮುಂಬರುವ ದಿನಗಳಲ್ಲಿ ಶಾಸಕರನ್ನು ಟೀಕಿಸುವ ಮಾತಿಗೆ ಕಡಿವಾಣ ಹಾಕದಿದ್ದರೇ ಚಂದ್ರೇಶ್ ನಿಮ್ಮ ಅಸಲಿತನವನ್ನು ಸಾರ್ವಜನಿಕವಾಗಿ ಬಯಲಿಗೆಳೆಯಬೇಕಾದೀತು ಎಂದು ಎಚ್ಚರಿಸಿದರು.

      ಶಕ್ತಿ ಕೇಂದ್ರ ಪ್ರಮುಖ್ ಕಾಳಂಜಿಹಳ್ಳಿ ಸೋಮಶೇಖರ್ ಮಾತನಾಡಿ ಸಾರಿಗೆಹಳ್ಳಿ ಕೆರೆಯಲ್ಲಿ ಯುವಕನೋರ್ವ ಕಾಣೆಯಾಗಿ 48 ಗಂಟೆ ಕಳೆದರೂ ಸ್ಥಳಕ್ಕೆ ಬಾರದಿದ್ದ ಸಿ.ಪಿ.ಐ. ನಿರ್ಲಕ್ಷ್ಯತೆಯನ್ನು ಶಾಸಕರು ಖಂಡಿಸಿದ್ದಾರೆ. ಇದನ್ನು ಪ್ರಶ್ನಿಸಿದ ಮಸಾಲಜಯರಾಮ್ ತಾಲೂಕಿನ ಆಡಳಿತ ನೆಡೆಸಲು ಅಸಮರ್ಥರೆಂದು ಚಂದ್ರೇಶ್ ನೀಡಿರುವ ಹೇಳಿಕೆ ಬಾಲಿಶವಾಗಿದೆ. ಭ್ರಷ್ಟ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕೆಲಸಕ್ಕೆ ಶಾಸಕ ಮಸಾಲಜಯರಾಮ್ ಮುಂದಾಗಿದ್ದಾರೆ.

       ಗುತ್ತಿಗೆ ಮಾಡಿಕೊಂಡು ಒಂದಷ್ಟು ಹಣ ತಂದು ಮನಸೋ ಇಚ್ಚೆ ಚಂದ್ರೇಶ್ ಮಾತನಾಡುತಿದ್ದಾರೆ. ಚಂದ್ರೇಶ್ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಭ್ರಷ್ಟ ಅದಿಕಾರಿಗಳ ಪರ ವಕಾಲತ್ತು ವಹಿಸುವ ಹೇಳಿಕೆ ಅವರ ಅಪ್ರಬುದ್ದತೆಗೆ ಹಿಡಿದ ಕನ್ನಡಿಯಾಗಿದೆ. ಇದೇ ಚಾಲಿಯನ್ನು ಚಂದ್ರೇಶ್ ಮೂಂದುವರೆಸಿದರೇ ಅವರ ಮನೆ ಮುಂದೆ ಧರಣಿ ನೆಡೆಸುವುದಾಗಿ ಕಿಡಿಕಾರಿದರು.ಗೋಷ್ಟಿಯಲ್ಲಿ ನಗರ ಘಟಕದ ನಾಗಲಾಪುರ ಮಂಜಣ್ಣ, ಟಿ.ಎಮ್, ಜಗದೀಶ್, ಕಾಳಚಿಜೀಹಳ್ಳಿ ಸೋಮು, ಹಾವಾಳರವಿಕುಮಾರ್ ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link