ಕೊರಟಗೆರೆ:-
ಬಿರುಗಾಳಿ ಸಮೇತ ಮಳೆಯಿಂದ ರಸ್ತೆ ಬದಿಯಲ್ಲಿದ್ದ 15ಕ್ಕೂ ಹೆಚ್ಚು ಮರ, 2ವಿದ್ಯುತ್ ಪರಿವರ್ತಕ ಮತ್ತು 30ಕ್ಕೂ ಹೆಚ್ಚು ವಿದ್ಯುತ್‍ಕಂಬಗಳು ನೆಲಕ್ಕೆ ಬಿದ್ದಿರುವ ಪರಿಣಾಮ ಬೆಸ್ಕಾಂ ಇಲಾಖೆಗೆ 5ಲಕ್ಷಕ್ಕೂ ಅಧಿಕ ನಷ್ಟವಾಗಿರುವಘಟನೆಜರುಗಿದೆ.
ತಾಲೂಕಿನ ತೋವಿನಕೆರೆ ಹೋಬಳಿ ಬೂದಗವಿ ಗ್ರಾಪಂ ವ್ಯಾಪ್ತಿಯ ಮಲ್ಲೇಕಾವುನಿಂದ ಸಿದ್ದರಬೇಟ್ಟ ಮಾರ್ಗ ಮತ್ತು ಮಲ್ಲೇಕಾವುನಿಂದಗೌಜಕಲ್ಲುಗ್ರಾಮಕ್ಕೆ ಸಂಪರ್ಕಕಲ್ಪಿಸುವರಸ್ತೆಯ ಬದಿಯಎರಡುಕಡೆಯ ವಿದ್ಯುತ್‍ಕಂಬ ಬಿರುಗಾಳಿಯಿಂದ ನೆಲಕ್ಕೆ ಬಿದ್ದಿದ್ದುರೈತರು ಮತ್ತು ಜಾನುವಾರುಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ.
ತುಂಬಾಡಿಯಿಂದ ಸಿದ್ದರಬೇಟ್ಟಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಮಾರ್ಗದ ಮಲ್ಲೇಕಾವು ಸಮೀಪದ ನಿರಂತರಜ್ಯೋತಿಯ 30ವಿದ್ಯುತ್ ಕಂಬ ಮತ್ತುಗೌಜಗಲ್ಲುಗ್ರಾಮಕ್ಕೆ ಸಂಪರ್ಕಕಲ್ಪಿಸುವರಸ್ತೆಯಎಡ ಮತ್ತು ಬಲಭಾಗದ ಟ್ರಾನ್ಸ್‍ಪಾರಂಗಳು ನೆಲಕ್ಕೆ ಹುರುಳಿ ಲಕ್ಷಾಂತರರೂ ನಷ್ಟವಾಗಿದೆ.
ಬಿರುಗಾಳಿ ಸಮೇತ ಮಳೆಯಿಂದ ವಿದ್ಯುತ್‍ಕಂಬದ ಮೇಲೆ ನಾಲ್ಕು ಮರಗಳು ಬಿದ್ದಿರುವ ಪರಿಣಾಮ 1ಲಕ್ಷ 60ಸಾವಿರ ರೂ ವೆಚ್ಚದ 30ವಿದ್ಯುತ್‍ಕಂಬ, 2ಲಕ್ಷ 80ಸಾವಿರ ವೆಚ್ಚದಟ್ರಾನ್ಸ್‍ಪಾರಂ ಮತ್ತುಉಪಕರಣ ಸೇರಿ ಸುಮಾರು 50ಸಾವಿರ ವೆಚ್ಚದ 1ಕೀಮೀ ದೂರದ ವಿದ್ಯುತ್‍ತಂತಿತುಂಡಾಗಿರುವಘಟನೆ ವರದಿಯಾಗಿದೆ.
ಸಿದ್ದರಬೇಟ್ಟ ವ್ಯಾಪ್ತಿಯಲ್ಲಿ ಏಕಾಏಕಿ ಪ್ರಾರಂಭವಾದ ಬಿರುಗಾಳಿ ಮಳೆಗೆ ಮಾವು ಮತ್ತು ಹಲಸಿನ ಮರಗಳು ನೆಲಕ್ಕೆ ಬಿದ್ದಿವೆ. ಕಂದಾಯ ಮತ್ತುತೋಟಗಾರಿಕೆಅಧಿಕಾರಿ ವರ್ಗ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಬೇಕು.ಸರಕಾರದಿಂದ ಬರುವಂತಹ ಪರಿಹಾರವನ್ನು ರೈತರಿಗೆ ಕೂಡಿಸುವ ಕೆಲಸ ಮಾಡಬೇಕುಎಂದು ಸ್ಥಳೀಯ ರೈತರುಒತ್ತಾಯ ಮಾಡಿದ್ದಾರೆ.
ಬೆಸ್ಕಾಂ ಎಇಇ ಮಲ್ಲಣ್ಣ ಪತ್ರಿಕೆಯೊಂದಿಗೆ ಮಾತನಾಡಿ ಮಲ್ಲೇಕಾವು ಬಳಿ ಬಿರುಗಾಳಿ ಹೆಚ್ಚಾಗಿ 30ಕ್ಕೂ ಹೆಚ್ಚು ವಿದ್ಯುತ್‍ಕಂಬ ಮುರಿದು ಬಿದ್ದಿವೆ. ಅಂದಿನ ರಾತ್ರಿಯೇ ಸಿಬ್ಬಂದಿಗಳು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ನಂತರ ಮಾರನೆ ದಿನ ಮುಂಜಾನೆಯೇಬೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈಗಾಗಲೇ 10ಕ್ಕೂ ಹೆಚ್ಚು ವಿದ್ಯುತ್‍ಕಂಬ ಹಾಕಿ ಬೆಳಕಿಗೆ ವ್ಯವಸ್ಥೆ ಮಾಡಲಾಗಿದೆಎಂದರು.