ಬೆಂಗಳೂರು
ಹೆಗ್ಗನಹಳ್ಳಿ ಕಬಾಬ್ ಅಂಗಡಿಗೆ ನುಗ್ಗಿ ಮಾಲೀಕ ಉಮೇಶ್ನ ಲಾಂಗ್ ದೊಣ್ಣೆಗಿಂದ ಹೊಡೆದು ಕೊಲೆ ನಡೆಸಿದ ಕೃತ್ಯಕ್ಕೆ ಆತನ ಪತ್ನಿ ರೂಪಾ ಮೂಲವಾಗಿರುವುದು ರಾಜಗೋಪಾಲನಗರ ಪೊಲೀಸರ ಪ್ರಕರಣದ ತನಿಖೆಯಲ್ಲಿ ಪತ್ತೆಯಾಗಿದೆ.
ಕಳೆದ ಮೇ.12ರಂದು ರಾತ್ರಿ ಉಮೇಶ್ ಕಣ್ಣಿಗೆ ಖಾರದಪುಡಿ ಎರಚಿ, ಲಾಂಗ್,ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದ ನಾಲ್ವರನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಪತ್ನಿಯೇ ಮೂಲವಾಗಿರುವುದು ಕಂಡುಬಂದಿದೆ.
ಕೃತ್ಯವೆಸಗಿದ ಹೆಗ್ಗನಹಳ್ಳಿಯ ರವೀಶ್ ಅಲಿಯಾಸ್ ರವಿ (44), ಜಿತೇಂದ್ರ ಅಲಿಯಾಸ್ ಜಿತು (30),ಅಂಧ್ರಹಳ್ಳಿಯ ಸುಮಂತ್ ರಾಜು ಅಲಿಯಾಸ್ ಸುಮಂತ್ (29) ಹಾಗೂ ಪ್ರದೀಪ್ ಕುಮಾರ್ ಅಲಿಯಾಸ್ ಪ್ರದೀಪ್ (40)ನನ್ನು ಬಂಧಿಸಿ ಪರಾರಿಯಾಗಿರುವ ಪ್ರಮುಖ ಆರೋಪಿ ಹೆಗ್ಗನಹಳ್ಳಿಯ ಕಿಶೋರ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಗಳಲ್ಲಿ ರವೀಶ್ ಹಾಗೂ ಜಿತೇಂದ್ರ ಹಾಸನದ ಮೂಲದವರಾಗಿದ್ದು, ಸುಮಂತ್ ಚಿಕ್ಕಮಗಳೂರಿನ ಮೂಲದವನಾದರೆ,ಪ್ರದೀಪ್ ಚಿತ್ರದುರ್ಗದಿಂದ ಬಂದು ಕ್ಯಾಬ್ ಚಾಲಕನಾಗಿದ್ದ.ಈ ನಾಲ್ವರ ಗ್ಯಾಂಗ್ ಕಟ್ಟಿಕೊಂಡ ಕಿಶೋರ್ ಕಳೆದ ಮೇ 12 ರಂದು ರಾತ್ರಿ 9.30ರ ವೇಳೆ ಹೆಗ್ಗನಹಳ್ಳಿಯ ಶ್ರೀಗಂಧನಗರದ 2ನೇ ಕ್ರಾಸ್ನ ಕಬಾಬ್ ಅಂಗಡಿಗೆ ನುಗ್ಗಿ ಮಾಲೀಕ ಉಮೇಶ್ (27) ಅವರ ಕಣ್ಣಿಗೆ ಖಾರದಪುಡಿ ಎರಚಿ, ಲಾಂಗ್, ದೊಣ್ಣೆಗಳಿಂದ ಹೊಡೆದು ಕೊಲೆಮಾಡಿ ಪರಾರಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
