ಬೆಂಗಳೂರು:
ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ 2019-20ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ 11 ಗಂಟೆಗೆ ಪ್ರಕಟವಾಗಿದೆ.
ಮೇ 25ರ ಬೆಳಗ್ಗೆ 11 ಗಂಟೆಗೆ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪ್ರಕಟಗೊಳಿಸಿದ್ದು, ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸುದ್ದಿಗೋಷ್ಠಿ ನಡೆಸಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಸಂಬಂಧಪಟ್ಟ ವೆಬ್ಸೈಟ್ಗಳಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ.
ರ್ಯಾಂಕ್ ವಿದ್ಯಾರ್ಥಿಗಳು :
ಎಂಜಿನಿಯರಿಂಗ್ ವಿಭಾಗ: ಜಫಿನ್ ಬಿಜು (ಪ್ರಥಮ) ಬೆಂಗಳೂರು, ಚಿನ್ಮಯಿ (ದ್ವಿತೀಯ) ಮಂಗಳೂರು, ಸಾಯಿ ಸಾಕೇತಿಕ ಚೆಕೂರಿ (ತೃತೀಯ) ಬೆಂಗಳೂರು
ನ್ಯಾಚುರೋಪತಿ ಮತ್ತು ಯೋಗ: ಮಹೇಶ್ ಆನಂದ್ (ಪ್ರಥಮ) ಬೆಂಗಳೂರು, ವಸುದೇವ್ (ದ್ವಿತೀಯ) ಮೈಸೂರು, ಉದಿತ್ ಮೋಹನ್ (ತೃತೀಯ) ಬೆಂಗಳೂರು
ಬಿಎಸ್ಸಿ ಕೃಷಿ: ಕೀರ್ತನಾ ಎಂ ಅರುಣ್ (ಪ್ರಥಮ) ಬೆಂಗಳೂರು, ಭುವನ್ ಬಿ (ದ್ವಿತೀಯ) ಮಂಗಳೂರು, ಶ್ರೀಕಾಂತ್ ಎಂಲ್ (ತೃತೀಯ) ಹಾಸನ
ಬಿಎಸ್ಸಿ ಪಶುವಿಜ್ಞಾನ: ಪಿ ಮಹೇಶ್ ಆನಂದ್ (ಪ್ರಥಮ) ಬೆಂಗಳೂರು, ಉದಿತ್ ಮೋಹನ್ (ದ್ವಿತೀಯ) ಬೆಂಗಳೂರು, ಸಾಯಿ ರಾಮ್ (ತೃತೀಯ) ಬೆಂಗಳೂರು
ಫಾರ್ಮಸಿ: ಸಾಯಿ ಸಾಕೇತಿಕಾ ಚೆಕೂರಿ (ಪ್ರಥಮ) ಬೆಂಗಳೂರು, ಜಫಿನ್ ಬಿಜು (ದ್ವಿತೀಯ) ಬೆಂಗಳೂರು, ಆರ್.ಚಿನ್ಮಯ್ (ತೃತೀಯ) ಮಂಗಳೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
