ದಾವಣಗೆರೆ:

ಯೋಧನೊಬ್ಬ ತನ್ನ ಪ್ರಿಯತಮೆಯ ತಂದೆಯ ಮೇಲೆ ಗುಂಡು ಹಾರಿಸಿರುವ ಘಟನೆ ಹೊನ್ನಾಳಿಯ ಬಿದರಘಟ್ಟೆಯಲ್ಲಿ ನಡೆದಿದೆ.
ದೇವರಾಜ್( 27)ಗುಂಡು ಹಾರಿಸಿರುವ ಯೋಧ. ಈತ ಅದೇ ಗ್ರಾಮದ ಪ್ರಕಾಶ್ ಎಂಬುವವರ ಮಗಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ರಜೆಯ ಮೇಲೆ ಊರಿಗೆ ಬಂದಿದ್ದ ದೇವರಾಜ್, ಪ್ರೇಯಸಿಯ ತಂದೆ ಪ್ರಕಾಶ್ ಜಗಳವಾಡಿದ್ದು ಈ ವೇಳೆ ಕೋಪಗೊಂಡ ಯೋಧ ದೇವರಾಜ್ ಪ್ರಕಾಶ್ ಮೇಲೆ ಗುಂಡು ಹಾರಿಸಿದ್ದಾರೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಪ್ರಕಾಶ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ಸಂಬಂಧ ಹೊನ್ನಾಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಯೋಧ ದೇವ್ರಾಜ್ನನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








