2 ತಿಂಗಳಿಂದ ನೀರು ಬಿಡದೆ ನಿರ್ಲಕ್ಷ್ಯ

ಹುಳಿಯಾರು

      ಪಟ್ಟಣ ಪಂಚಾಯ್ತಿಯಿಂದ 2 ತಿಂಗಳಿಂದ ನೀರು ಬಿಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಆರೋಪಿಸಿ ಹುಳಿಯಾರಿನ ಬಾಲಾಜಿ ಚಿತ್ರಮಂದಿ ರದ ಹಿಂಭಾಗದ ನಿವಾಸಿಗಳು ರೈತಸಂಘ ಹಾಗೂ ಸಮಾಜಿಕ ಹೋರಾಟಗಾರರ ನೆರವು ಪಡೆದು ಪ್ರತಿಭಟನೆಗೆ ಮುಂದಾದಾಗ ಪಪಂ ಸದಸ್ಯ ಸ್ಥಳಕ್ಕೆ ಧಾವಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ನಡೆದಿದೆ.

     ಹುಳಿಯಾರಿನ ಬಾಲಾಜಿ ಚಿತ್ರ ಮಂದಿರದ ಹಿಂಭಾಗದಲ್ಲಿನ ಗ್ರಾಪಂ ಮಾಜಿ ಅಧ್ಯಕ್ಷೆ ಪುಟ್ಟಿಬಾಯಿ ಅವರ ಮನೆಯ ಬಳಿಯ ಮೂವತ್ತಕ್ಕೂ ಹೆಚ್ಚು ಮನೆಗಳಿಗೆ 2 ತಿಂಗಳಿಂದ ಪಪಂನಿಂದ ನೀರು ಬಿಡದೆ ನಿರ್ಲಕ್ಷ್ಯಿಸಿದ್ದಾರೆ. ಪರಿಣಾಮ ಬಿಂದಿಗೆಗೆ ಎಡನ್ಮೂರು ರೂ. ದುಡ್ಡು ಕೊಟ್ಟು ಖರೀಧಿಸುವಂತ್ತಾಗಿದೆ. ಅಲ್ಲದೆ ಅಕ್ಕಪಕ್ಕದ ಬೀದಿಗಳಲ್ಲಿ ನೀರು ಬಿಟ್ಟಾಗ ಅಲ್ಲಿನ ನಿವಾಸಿಗಳನ್ನು ಕಾಡಿ ಬೇಡಿ ನೀರು ಹಿಡಿಯುವ ಅನಿವಾರ್ಯತೆ ಸೃಷ್ಠಿಯಾಗಿದೆ ಎಂಬುದು ಆರೋಪವಾಗಿತ್ತು.

     2 ತಿಂಗಳ ಹಿಂದೆ ನಿತ್ಯ ನೀರು ಬರುತ್ತಿತ್ತಾದರೂ ಈ ಭಾಗಕ್ಕೇ ಪ್ರತ್ಯೇಕ ವಾಲ್ ಹಾಕಿದ ನಂತರದ ದಿನಗಳಲ್ಲಿ ನೀರು ಬಾರದಾಗಿದೆ. ಅಲ್ಲದೆ ಮತ್ತೊಂದು ಬೀದಿಗೆ ನಿತ್ಯ ನೀರು ಬಿಡಲಾಗುತ್ತದೆ. ಬಹುಮುಖ್ಯವಾಗಿ ಪ್ರಭಾವಿಗಳು ಹಾಗೂ ಹಣವಂತರ ಮನೆಗಳ ನೆಲ ತೊಟ್ಟಿಗಳಿಗೆ ಅಕ್ರಮವಾಗಿ ನಲ್ಲಿ ಸಂಪರ್ಕ ಕೊಟ್ಟಿದ್ದು ಅವರಿಗೆ ನೀರು ಹೆಚ್ಚಾಗಿ ಚರಂಡಿಗೆ ಬಿಡುವಷ್ಟು ಬಿಡುತ್ತಿದ್ದು ನಮಗೆ ಮಾತ್ರ 2 ತಿಂಗಳಿಂದ ಒಂದೇ ಒಂದು ಬಿಂದಿಕಗೆ ನೀರು ಬಿಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

     ನಿವಾಸಿಗಳ ಸಮಸ್ಯೆ ಆಲಿಸಲು ಬಂದಿದ್ದ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಹಾಗೂ ಸಮಾಜಿಕ ಹೋರಾಟಗಾರ್ತಿ ಜಯಲಕ್ಷ್ಮಿ ಅವರು ಪಪಂ ಸದಸ್ಯ ಅಹಮದ್ ಖಾನ್, ನೀರುಘಂಟಿ ರಾಘವೇಂದ್ರ ಅವರನ್ನು ದೂರವಾಣಿ ಮೂಲಕ ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು.

     ನೀರಿನ ಪೈಪ್ ಲೈನ್‍ನಲ್ಲಿ ಕಸಕಡ್ಡಿ ಕಟ್ಟಿಕೊಂಡ ಪರಿಣಾಮ ನೀರು ಹರಿಯದೆ ನೀರಿನ ಸಮಸ್ಯೆಯಾಗಿದೆ. ಅಲ್ಲದೆ ಈ ಭಾಗದಲ್ಲಿ ಅಕ್ರಮವಾಗಿ ನಲ್ಲಿ ಸಂಪರ್ಕ ಸಾಕಷ್ಟಿದ್ದು ಅವರ ತೊಟ್ಟಿಗಳಿಗೆ ಯತ್ತೇಚ್ಚವಾಗಿ ನೀರು ಹೋಗುತ್ತಿರುವುದರಿಂದ ಸಮಸ್ಯೆ ಸೃಷ್ಠಿಯಾಗಿದೆ. ಪಪಂ ಮುಖ್ಯಾಧಿಕಾರಿಗಳು ಸೂಚಿಸಿದರೆ ಪೈಪ್ ಲೈನ್ ದುರಸ್ತಿ ಮಾಡಿಸಿ, ಅಕ್ರಮ ನಲ್ಲಿ ಸಂಪರ್ಕ ಕಡಿತಗೊಳಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

      ತಕ್ಷಣ ಅಲ್ಲಿಂದಲೇ ಪಪಂ ಮುಖ್ಯಾಧಿಕಾರಿ ಬೂತಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ವಿವರಿಸಿದರು. ತಮ್ಮ ಮಗಳ ಮದುವೆಯ ಕಾರ್ಯದಲ್ಲಿದ್ದರೂ ಸಹ ನೀರಿನ ಸಮಸ್ಯೆ ಎಂದಾಕ್ಷಣ ತಾಳ್ಮೆಯಿಂದ ಸಮಸ್ಯೆ ಆಲಿಸಿ ತಕ್ಷಣ ಪೈಪ್ ದುರಸ್ತಿ ಮಾಡಿ 2 ತಿಂಗಳಿಂದ ನೀರು ಕೊಡದ ಪ್ರದೇಶಕ್ಕೆ ನೀರು ಕೊಡುವಂತೆಯೂ, ಅಕ್ರಮ ನಲ್ಲಿಗಳನ್ನು ಕೀಳಿಸುವಂತೆಯೂ ದೂರವಾನೀ ಮುಲಕವೇ ನೀರುಘಂಟಿಗೆ ಮೌಖಿಕ ಆದೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link