ಪಾವಗಡ :
ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ದ ಸಿಡಿದೆದ್ದ ಕ್ರಾಂತಿಕಾರಿಕ ಹೋರಾಟಗಾರ ಸಿಂಧೂರ ಲಕ್ಷ್ಮಣ ಎಂದು ಶಿಡ್ಲೆಕೋಣೆ ವಾಲ್ಮೀಕಿ ಗುರುಪೀಠದ ಸಂಜಯ್ ಕುಮಾರ್ ತಿಳಿಸಿದರು.
ಪಟ್ಟಣದ ಕುಮಾರಸ್ವಾಮಿ ಬಡಾವಣೆಯಲ್ಲಿನ ಶ್ರೀವಾಲ್ಮೀಕಿ ದೇವಾಸ್ಥನದಲ್ಲಿ ನಾಯಕ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಸಿಂಧೂರ ಲಕ್ಷಣ ಜಯಂತಿಯನ್ನು ಉದ್ಘಾಟಿಸಿ ಧಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು ಸಿಂಧೂರ ಲಕ್ಷಣ ಹುಟ್ಟು ಹೋರಾಟನಾಗಿದ್ದ ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಬ್ರೀಟಿಷರ ದಬ್ಬಾಳಿಕೆಯನ್ನು ನೇರವಾಗಿ ಪ್ರಶ್ನಿಸಿ ಖಂಡಿಸಿದ್ದ ವ್ಯಕ್ತಿ ಇಂತಹ ಕ್ರಾಂತಿಕಾರಿಕ ನಾಯಕನ್ನು ದೇಶ ರಾಜ್ಯ ಮರೆತಿದೆ ಎಂಬ ನೋವು ನಮ್ಮಲಿದೆ ಇಂತಹ ಮಹಾನ್ ನಾಯಕನ ನೆನಪಿಗಾಗಿ ಕೇಂದರ ಮತ್ತು ರಾಜ್ಯ ಸರ್ಕಾರಗಳು ಸಿಂಧೂರ ಲಕ್ಷಣ ಹೆಸರಿನಲ್ಲಿ ಸೈನಿಕ ಶಾಲೆಯನ್ನು ತೆರೆಯಬೇಕು ಹಾಗೂ ಶಾಲಾ ಪಠ್ಯಪುಸ್ತದಲ್ಲಿ ಲಕ್ಷಣನ ಇತಿಹಾಸವನ್ನು ಪ್ರತಿಯೋಬ್ಬರು ಓದುವಂತಾಗಬೇಕೆಂದರು.
ನಾಯಕ ನೌಕರರ ಸಂಘದ ಅದ್ಯಕ್ಷರಾದ ಅನಿಲ್ ಕುಮಾರ್ರವರು ಮಾತನಾಡಿ ಭಾರತ ಸ್ವತಂತ್ರ ಪೂರ್ವದಲ್ಲಿ ದೇಶದಲ್ಲಿ ಬ್ರೀಟಿಷರ ಹಾಗೂ ಧನವಂತರ ದೌರ್ಜನ್ಯವನ್ನು ಖಂಢಿಸಿದ ಏಕೈಕ ವ್ಯಕ್ತಿ ಸಿಂಧೂರಲಕ್ಷಣ ಇಂತಹ ಮಹಾನ್ ನಾಯಕನ ನೆನಪು ಹೋರಾಟದ ಬಗ್ಗೆ ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳ ಪಠ್ಯಗಳಲ್ಲಿ ಸೇರಿದಾಗ ಮಾತ್ರ ಅವರ ಹೋರಾಟಕ್ಕೆ ನ್ಯಾಯಸೀಕ್ಕಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಾಯಕ ನೌಕರರ ಸಂಘಕ್ಕೆ ನಿವೇಶನ ಧಾನಮಾಡಿದ ಹನುಮಂತನಹಳ್ಳಿ ರಾಮಾಂಜಿನಪ್ಪ , ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ , ನಿರ್ದೆಶಕರಾದ ನಟರಾಜ್ ,ಮುರಳಿ , ಅಂಜಿನೇಯ ,ಡಿಸಿಸಿ ಬ್ಯಾಂಕ್ ಸೀನಪ್ಪ , ಮಂಜುನಾಥ ,ಗಣೇಶ್ , ಪಂಚಣ್ಣ ,ಶ್ರೀರಂಗನಾಯಕ ,ಶ್ರೀನಿವಾಸ , ಬಸವರಾಜು , ಲಿಂಗಣ್ಣ ,ಶ್ರೀವಾಲ್ಮೀಕಿ ಜಾಗೃತಿ ವೇದಿಕೆಯ ಅದ್ಯಕ್ಷರಾದ ಲೋಕೇಶ್ ಪಾಳ್ಳೆಗಾರ್, ಮುಖಂಡರಾದ ಕನ್ನಮೇಡಿ ಸುರೇಶ್ , ಓಂಕಾರ್ ನಾಯಕ ,ಬಲರಾಮ್ , ರಾಜು ,ಮಂಜುನಾಥ , ಆಟೋಸತ್ತಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








