ಪತ್ರಿಕೆ ಮೇಲೆ ಮುಖ್ಯಮಂತ್ರಿಗಳಿಂದ ದೂರು ದಾಖಲು ಪ್ರಕರಣ : ಪತ್ರಕರ್ತರ ಆಕ್ರೋಶ.

ಚಳ್ಳಕೆರೆ

   ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್‍ಕುಮಾರಸ್ವಾಮಿ ವಿರುದ್ದ ರಾಜ್ಯದ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಯನ್ನು ಆದರಿಸಿ ಪತ್ರಿಕೆ ಸಂಪದಾಕರ ಮೇಲೆ ಮೊಕದ್ದಮೆ ದಾಖಲಿಸಿದ್ದನ್ನು ವಿರೋಧಿಸಿ ನಗರದ ಪತ್ರಕರ್ತರು ಮುಖ್ಯಮಂತ್ರಿಗಳ ಕ್ರಮಗಳನ್ನು ವಿರೋಧಿಸಿ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.

     ಲೋಕಸಭಾ ಚುನಾವಣೆ ನಂತರ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ದಾಂಧಲೆ ನಡೆಸಿದ ಪ್ರಕರಣದ ಬಗ್ಗೆ ಪತ್ರಿಕೆ ಸಂಪೂರ್ಣವಾಗಿ ವರದಿ ನೀಡಿತ್ತು. ವರದಿಯನ್ನು ಆದರಿಸಿ ರಾಜ್ಯದ ಮುಖ್ಯಮಂತ್ರಿಗಳು ಈ ಬಗ್ಗೆ ಸಂಬಂಧಪಟ್ಟ ಪತ್ರಿಕೆಯಿಂದ ಮಾಹಿತಿಯನ್ನು ಸಹ ಪಡೆಯದೇ ಪತ್ರಿಕೆಯ ಪ್ರಧಾನ ಸಂಪದಾಕ ವಿಶ್ವೇಶ್ವರ ಭಟ್‍ರವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯದ ಹರಣಕ್ಕೆ ಯತ್ನಿಸಿದ್ದಾರೆ. ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪತ್ರಿಕೆಗಳು ನಿಯಮ ಬದ್ದವಾಗಿ ಕಾರ್ಯಮಾಡುವುದು ಸಹಜ.

       ಪತ್ರಿಕೆಗಳು ಸದಾ ಸಮಾಜದ ಜಾಗೃತಿಗಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ತಮ್ಮ ಪುತ್ರನ ಮೇಲೆ ಬಂದ ಪತ್ರಿಕಾ ವರದಿಗಳ ಬಗ್ಗೆ ಸೌಜನ್ಯಕ್ಕೂ ಮಾಹಿತಿ ಪಡೆಯದ ಮುಖ್ಯಮಂತ್ರಿ ಪ್ರಕರಣ ದಾಖಲಿಸುವ ಮೂಲಕ ರಾಜ್ಯದ ಪತ್ರಿಕಾ ಕ್ಷೇತ್ರಕ್ಕೆ ಅಗೌರವವನ್ನು ಉಂಟು ಮಾಡಿದ್ಧಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

      ಮನವಿ ಸ್ವೀಕರಿಸಿದ ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ಪತ್ರಕರ್ತರು ನೀಡಿರುವ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ರಾಜಪಾಲರಿಗೆ ಕಳುಹಿಸಿಕೊಡುವ ಭರವಸೆ ನೀಡಿದರು.

       ಈ ಸಂದರ್ಭದಲ್ಲಿ ಪತ್ರಕರ್ತರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ, ಬಿ.ವಿ.ಮಂಜುನಾಥ, ನಾವೆಲ್ಲಾ ಮಹೇಶ್, ಡಿ.ಈಶ್ವರಪ್ಪ, ರಾಮಾಂಜನೇಯ, ಮಾರಣ್ಣ, ಹಯಾತ್ ಭಾಷ, ಚನ್ನಂಗಿರಂಗನಾಥ, ಗೋಪನಹಳ್ಳಿ ಶಿವಣ್ಣ, ಬಿ.ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap