ಹೊಸದಿಲ್ಲಿ:
ನೂತನ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿಂದೆಯೇ ರಾಜನಾಥ್ ಸಿಂಗ್ ಅವರು ಸೋಮವಾರ ಸಿಯಾಚಿನ್ಗೆ ಭೇಟಿ ನೀಡಲಿದ್ದಾರೆ.ರಾಜನಾಥ್ ಅವರೊಂದಿಗೆ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೂ ತೆರಳಲಿದ್ದಾರೆ. ಯೋಧರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವರಾದ ಬಳಿಕ ಮೊದಲ ಬಾರಿಗೆ ದೆಹಲಿಯಿಂದ ಹೊರಗಿನ ಸೇನಾ ನೆಲೆಗೆ ರಾಜನಾಥ್ ಸಿಂಗ್ ಅವರು ಭೇಟಿ ನೀಡುತ್ತಿದ್ದಾರೆ.
ಹಿಮಾಲಯದ ಪೂರ್ವ ಕರಕೋರಮ್ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್ ನಿರ್ಗಲ್ಲಿನಲ್ಲಿ ಚಳಿಗಾಲದಲ್ಲಿ ಸರಾಸರಿ ಸುಮಾರು 1000 ಸೆಂಟೀ ಮೀಟರ್ನಷ್ಟು ಭಾರೀ ಹಿಮಪಾತವಾಗುತ್ತದೆ, ಕನಿಷ್ಠ ತಾಪಮಾನ ಸುಮಾರು -5೦ ಡಿಗ್ರಿ ಸೆಂಟಿಗ್ರೇಡ್ ಗೆ ಇಳಿಯುತ್ತದೆ.
ಸಿಯಾಚಿನ್ ಪ್ರದೇಶಕ್ಕಾಗಿ ಭಾರತ ಹಾಗು ಪಾಕಿಸ್ತಾನದ ನಡುವೆ ವಿವಾದವಿದ್ದು , ರಾಷ್ಟ್ರಗಳು ಈ ಪ್ರದೇಶ ತಮಗೆ ಸೇರಿದ್ದೆಂದು ವಾದಿಸುತ್ತಲೆ ಬಂದಿವೆ. ಉಭಯ ದೇಶಗಳೂ ಕಾವಲಿಗಾಗಿ ಯೋಧರನ್ನು ನಿಯೋಜಿಸಿದ್ದು ಹಲವು ಯೋಧರು ಹಿಮಸಮಾಧಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
