ಚಿತ್ರದುರ್ಗ
ಈಗ ಮಳೆಯ ಕಾಲ ಸರಿಯಾದ ರೀತಿಯಲ್ಲಿ ಮಳೆ ಬಾರದಿದ್ದರೆ ಮುಂದಿನ ದಿನಗಳ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದ್ದು, ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಕಷ್ಟವಾಗಲಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಶಾಸಕರು ಈಗ ನಮಗೆ ರೋಹಿಣಿ ಸೇರಿದಂತೆ ಇತರೆ ಮಳೆಗಳು ಅಗತ್ಯವಾಗಿ ಬರಬೇಕಾದ ಮಳೆಯ ಕಾಲವಿದು ಆದರೆ ಇದುವರೆವಿಗಾದರೂ ಸುಳಿವಿಲ್ಲ, ಇವು ಇಲ್ಲಿ ಮಾತ್ರವಲ್ಲದೆ ಎಲ್ಲಿಯೂ ಸಹಾ ತಮ್ಮ ಮಳೆಯ ಛಾಯೆಯನ್ನು ತೋರಿಸಿಲ್ಲ, ಚಿತ್ರದುರ್ಗ ನಗರಕ್ಕೆ ವಿವಿಸಾಗರದಿಂದ ನೀರು ಬರುತ್ತಿಲ್ಲ, ಆದರೆ ಶಾಂತಿಸಾಗರದಿಂದ ನೀರು ಬರುತ್ತಿದೆ ಅದು ಸಹಾ ಭದ್ರಾದಿಂದ ಶಾಂತಿಸಾಗರಕ್ಕೆ ನೀರನ್ನು ಬಿಡುವಂತೆ ನಾನು ಮತ್ತು ಚನ್ನಗಿರಿಯ ಶಾಸಕರು ಒತ್ತಡ ತಂದಿದ್ದರಿಂದ ದಾವಣಗೆರೆ, ಹರಿಹರಕ್ಕೆ ಚಾನಲ್ ಮೂಲಕ ಹೋಗುವ ನೀರನ್ನು ನಮ್ಮ ಶಾಂತಿ ಸಾಗರಕ್ಕೆ ಬಿಡಲಾಗಿದೆ ಇದರಿಂದ ನೀರು ಇನ್ನು 15 ರಿಂದ 20 ದಿನಗಳ ಕಾಲ ಸುಧಾರಣೆ ಮಾಡಬಹುದಾಗಿದೆ ಎಂದರು.
ಚಿತ್ರದುರ್ಗ ನಗರದಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ, ಇದೇ ರೀತಿ ನಗರಸಭೆಯಿಂದಲೂ ಸಹಾ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ ಆದರೆ ನೀರು ಮಾತ್ರ ಎಲ್ಲಿಗೆ ಹೋಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದ ತಿಪ್ಪಾರೆಡ್ಡಿ, ನಗರದ ಚಳ್ಳಕರೆ ಗೇಟ್‍ನಿಂದ ಪ್ರವಾಸಿ ಮಂದಿರದವರಗೂ ರಸ್ತೆ ಆಗಲಿಕರಣ ಕಾಮಗಾರಿ ಪ್ರಾರಂಭವಾಗಿದೆ ಇದರಲ್ಲಿ ಬೆಸ್ಕಾಂ ಕಂಪನಿಯವರು ಈ ದಾರಿಯಲ್ಲಿ ಬರುವ ವಿವಿಧ ರೀತಿಯ ಕಂಬಗಳು ಮತ್ತು ಲೈನ್‍ಗಳನ್ನು ಸರಿ ಮಾಡಲು 2 ರಿಂದ 3 ಕೋಟಿ ರೂ.ಗಳನ್ನು ಕೇಳಿದ್ದಾರೆ, ಇದಕ್ಕೆ ನಗರದ ಮಧ್ಯೆ ಇರುವ ಮಾರುಕಟ್ಟೆಯ ಕಾಮಗಾರಿಗೆ ಸರ್ಕಾರದಿಂದ ಅನುದಾನವನ್ನು ಕೇಳಿ ತರಲಾಗಿತ್ತು ಆದರೆ ರಸ್ತೆ ಆಗಲೀಕರಣ ಕಾಮಗಾರಿಗೆ ಅದನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಅದಕ್ಕೆ ಬೇರೆ ಆನುದಾನವನ್ನು ಹೊಂದಿಸಬೇಕಿದೆ ಎಂದರು.
ಇದೇ ಕೆಳಗೋಟೆಯ ನಾಗರೀಕರು ಶಾಸಕರ ಬಳಿ ನೀರಿನ ತೊಂದರೆಯನ್ನು ತಿಳಿಸಿದಾಗ ಈಗಾಗಲೇ ಕೆಳಗೋಟೆಯ ಗಣಪತಿ ದೇವಾಲಯದ ಬಳಿ ಕೊಳವೆಬಾವಿಯನ್ನು ಕೊರೆಯಿಸಲಾಗಿದೆ. ಶೀಘ್ರವಾಗಿ ಪೈಪ್ ಲೈನ್ ಕಾಮಗಾರಿ ಮಾಡಲಾಗುವುದು ಅಲ್ಲಿಯವರೆಗೂ ಕೊಳವೆಬಾವಿಯ ಪಕ್ಕದಲ್ಲಿ ನೆಲ್ಲಿಗಳನ್ನು ಮಾಡಿ ನೀರನ್ನು ಬಿಡಲಾಗುತ್ತಿದೆ ಅದರ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿ, ಸಚಿವರು ಸಹಾ ಜಿಲ್ಲೆಯ ಅಭೀವೃದ್ದಿ ಕುಡಿಯುವ ನೀರು ಮತ್ತು ಬರಗಾಲದ ಸಮಸ್ಯೆಯನ್ನು ಎದುರಿಸಲು ಅಗತ್ಯ ಇರುವ ಕಾರ್ಯವನ್ನು ಮಾಡಬೇಕಿದೆ ಜನತೆಗೆ ನೀರನ್ನು ಒದಗಿಸಿದವರಿಗೆ ಹಣವನ್ನು ಕೊಡಿಸುವ ಕಾರ್ಯವನ್ನು ಸಹಾ ಮಾಡಬೇಕಿದೆ ಎಂದರು.
ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಇಷ್ಟು ದಿನ ನಗರದಲ್ಲಿ ಶಾಂತಿಸಾಗರ ಮತ್ತು ವಿವಿಸಾಗರ ಹಾಗೂ ನಗರದ ವಿವಿಧ ಕೊಳವೆಬಾವಿಗಳಲ್ಲಿ ನೀರನ್ನು ಬಳಕೆ ಮಾಡಲಾಗುತ್ತಿತು ಆದರೆ ಈಗ ವಿವಿಸಾಗರದಲ್ಲಿ ನೀರು ಕೊನೆಯ ಹಂತಕ್ಕೆ ಬಂದಿದೆ, ಶಾಂತಿಸಾಗರಕ್ಕ ಭದ್ರಾದಿಂದ ನೀರು ಬಂದರೆ ಮಾತ್ರ ನೀರು ಇನ್ನೂ ನಗರದ ಕೊಳವೆಬಾವಿಗಳಲ್ಲಿ ಅಂರ್ತಜಲ ಕಡಿಮೆಯಾಗಿ ನೀರು ಬರುತ್ತಿಲ್ಲ, ಇದರಿಂದ ಜನತೆಗೆ ಈ ಬಾರಿ ನೀರಿನ ಸಮಸ್ಯೆ ಕಂಡು ಬರುತ್ತಿದೆ ಎಂದು ನೆರದಿದ್ದ ಜನತೆಗೆ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








