ರಾಯಚೂರು:
ವಿದ್ಯುತ್ ತಂತಿ ಸ್ಪರ್ಶಿಸಿ ಸಹೋದರರಿಬ್ಬರು ಮೃತಪಟ್ಟಿರುವ ಧಾರುಣ ಘಟನೆ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ನಡೆದಿದೆ.
ಹುಸೇನ್ ಬಾಷಾ (36) ಹಾಗೂ ಹಸನ್ ಬಾಷಾ (34) ಮೃತ ದುರ್ದೈವಿಗಳು. ನಿನ್ನೆ(ಭಾನುವಾರ)ಸಂಜೆಯಿಂದ ಭಾರೀ ಗಾಳಿ ಬೀಸಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದವು.
ಅದನ್ನು ಸರಿಪಡಿಸಲು ಹೋಗಿದ್ದ ಹುಸೇನ್‍ಗೆ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಅಣ್ಣನ ರಕ್ಷಣೆಗೆ ಮಾಡಲು ಹಸನ್ ಹೋಗಿದ್ದಾರೆ. ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ. ಸಿಂಧನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ