ಹಿರಿಯೂರು :
ಪದವೀಧರ ಶಿಕ್ಷಕರಿಗೆ ಮುಂಬಡ್ತಿ ನೀಡದೇ ಇರುವುದರಿಂದ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ನಗರದ ಬಿಇಓ ಕಛೇರಿ ಮುಂಭಾಗ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾನಿರತ ಪದವೀಧರ ಶಿಕ್ಷಕ ಸಂಘದ ತಾಲ್ಲೂಕು ಅಧ್ಯಕ್ಷರಾದ ಎನ್.ಬಸವರಾಜ್ ಮಾತನಾಡಿ, 1ರಿಂದ 7ನೇ ತರಗತಿಗೆ ಎಂದು ನೇಮಕವಾದ ಶಿಕ್ಷಕರನ್ನು 1ರಿಂದ 5ಕ್ಕೆ ಸೀಮಿತಗೊಳಿಸಿ ಹಿಂಬಡ್ತಿ ನೀಡಿರುವುದು ನಿಜಕ್ಕೂ ಖಂಡನೀಯ ಎಂದರಲ್ಲದೆ, ಪ್ರಾಥಮಿಕ ಶಾಲಾ ಕರ್ತವ್ಯನಿರತ ಶಿಕ್ಷಕರು 6ರಿಂದ 8ನೇ ತರಗತಿಗಳನ್ನು ಬೋಧಿಸುತ್ತ ಬಂದಿದ್ದಾರೆ. ರಾಜ್ಯದಲ್ಲಿ 82 ಸಾವಿರಕ್ಕಿಂತ ಅಧಿಕ ಪದವಿ ಬಿ.ಎ, ಬಿಎಸ್‍ಸಿ, ಎಂ.ಎ, ಎಂ.ಎಸ್.ಸಿ, ಬಿಇಡಿ, ಎಂ.ಇಡಿ, ಪಿಎಚ್‍ಡಿ ಮುಂತಾದ ಪದವಿ ಪಡೆದು, ಪ್ರಾಥಮಿಕ ಶಾಲೆಯಲ್ಲಿ 14 ವರ್ಷಗಳಿಂದ ಬೋಧಿಸುತ್ತಿದ್ದರೂ ಕೂಡ ಅವರನ್ನು ಮುಂಬಡ್ತಿಗೆ ಪರಿಗಣಿಸದೇ ಇರುವುದು ನಿಜಕ್ಕೂ ವಿಷಾಧನೀಯ ಎಂದರು.
ಈ ಬಗ್ಗೆ ಇಲಾಖೆ ಮುಖ್ಯಸ್ಥರು ಮಾನ್ಯ ಸಚಿವರನ್ನು ಕೂಡ ಭೇಟಿ ಮಾಡಿ ಮನವಿ ಸಲ್ಲಿಸಿದರು. ಯಾವುದೇ ಪ್ರಯೋಜನವಾಗಿರುವುದಿಲ್ಲ. ಹಿಂಬಡ್ತಿ ನೀಡಿರುವ ಕ್ರಮ ಇಲಾಖೆ ಮುಖ್ಯಸ್ಥರ ಅವೈಜ್ಞಾನಿಕ ಚಿಂತನೆಯಾಗಿದೆ. ಇದೇ ರೀತಿ ಮುಂದುವರೆದರೆ ಶಿಕ್ಷಕರು ತರಗತಿಗಳ ಬೋಧನೆಯನ್ನು ಬಹಿಷ್ಕರಿಸಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪ್ರ್ರಾಥಮಿಕ ಶಾಲಾ ಪದವೀಧರ ಶಿಕ್ಷಕಸಂಘದ ಗೌರವಾಧ್ಯಕ್ಷ ಎಸ್.ಲೋಕೇಶ್, ಉಪಾಧ್ಯಕ್ಷ ಡಿ.ಓಬಣ್ಣ, ಪ್ರಧಾನ ಕಾರ್ಯದರ್ಶಿ ಹೆಚ್.ಶಿವಮೂರ್ತಿ, ಖಜಾಂಚಿ ಹೆಚ್.ಪಾಂಡುರಂಗಪ್ಪ, ಜಿಲ್ಲಾ ಖಜಾಂಚಿ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಸಿ.ಈರಣ್ಣ, ಶಿವಲಿಂಗಯ್ಯ, ಶ್ರೀನಿವಾಸ್, ಬಸವರಾಜ, ಶುಭ, ಕುಮಾರಸ್ವಾಮಿ, ಟಿ.ದಿವಾಕರ್, ಜಗದೀಶ್‍ಯಾದವ್, ಬಿ.ರಮೇಶ್, ಶಿವಣ್ಣ, ಇದಾಯತ್‍ಉಲ್ಲಾಷರೀಫ್, ಇಮಾಮ್‍ಸಾಬ್, ಹೆಚ್.ರ್.ಶಂಕರ್, ಮಹಾಸ್ವಾಮಿ, ಅಂಬಿಕಾ, ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನ ಪದವೀಧರ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.