ತಿಪಟೂರು :
ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹಾಕಿರುವ ಡಿವೈಡರ್‍ಅನ್ನು ಕೆಲವು ಪ್ರಭಾವಿವ್ಯಕ್ತಿಗಳು ತಮಗೆ ಎಲ್ಲಿಬೇಕಾದಲ್ಲಿ ಒಡೆದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದ್ದು ಸಾರ್ವಜನಿಕರ ಪ್ರಾಣಕ್ಕೆ ಸಂಚಾರಕ್ಕೆ ಎಡೆಮಾಡಿಕೊಟ್ಟಿದೆ.
ಬುಧವಾರ ಸಂಜೆ ಇದಕ್ಕೆ ಇನ್ನೊಂದು ಕೊಂಡಿಎಂಬಂತೆ ದ್ವಿಚಕ್ರವಾಹನಕ್ಕೆ ಕ್ಯಾಂಟ್‍ಡಿಕ್ಕೆಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನದ ಸವಾರನ ತಲೆಗೆ ತೀರ್ವಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಗಣೇಶ ಮೆಡಿಕಲ್ ಮತ್ತು ಭಾರತ್ ಪೆಟ್ರೋಲ್ ಬಂಕ್ ಮುಂದೆ ಅವೈಜ್ಞಾನಿಕವಾಗಿ ಡಿವೈಡರ್ ಹೊಡೆದಿದ್ದು ಇಲ್ಲಿ ಪದೇ ಪದೆ ಅಪಘಾತಗಳು ಸಂಭವಿಸುತ್ತಿದ್ದು ಇದರ ಬಗ್ಗೆ ಪೋಲೀಸ್ ಇಲಾಖೆಯಾಗಲೀ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಏಕೆ ಕ್ರಮತೆಗೆದುಕೊಳ್ಳುತ್ತಿಲ್ಲ ಮತ್ತು ಇದಕ್ಕೆ ಇನ್ನೆಷ್ಟು ಅಮಾಯಕರ ಬಲಿಯಾಗಬೇಕೆಂಬುದು ಸಾರ್ವಜನಿಕರಿಗೆ ತಿಳಿಯದ ಯಕ್ಷಪ್ರಶ್ನೆಯಾಗಿದೆ.