ತುಮಕೂರು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ನಗರದ ಹನುಮಂತಪುರ ಸರ್ಕಾರಿ ಪ್ರೌಢ ಶಾಲೆ ಗೆ ಬೆಳಿಗ್ಗೆ 10-10 ನಿಮಿಷಕ್ಕೆ ದಿಢೀರ್ ಭೇಟಿ ನೀಡಿ ಶಿಕ್ಷಕರ ಹಾಜರಾತಿ ವಹಿ, ವೇಳಾ ಪಟ್ಟಿ, ಅಕ್ಷರ ದಾಸೋಹ, ಕ್ಷೀರ ಭಾಗ್ಯ ಕಾರ್ಯಕ್ರಮದ ದಾಖಲೆಗಳನ್ನು ಪರಿಶೀಲಿಸಿದರಲ್ಲದೆ ಪ್ರಾರ್ಥನೆ, 10ನೇ ತರಗತಿಯ ಗಣಿತ ಶಿಕ್ಷಕರ ಪಾಠ ವೀಕ್ಷಣೆ ಮಾಡಿದರು. ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಇತರೆ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವ ಬಗ್ಗೆ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ನಂತರ ಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆ ಕುರಿತು ಉದಾಹರಣೆ ಸಹಿತ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.