ತುಮಕೂರು ;
ಹೇಮಾವತಿ ನದಿ ನೀರು ಹಂಚಿಕೆಗೆ ವಿಚಾರವಾಗಿ ಹೆಚ್.ಡಿ. ರೇವಣ್ಣ ಹಾಗೂ ಜಿ.ಎಸ್. ಬಸವರಾಜ್ ನಡುವೆ ಕಳೆದ ಕೆಲ ದಿನಗಳಿಂದ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಅಲ್ಲದೆ ಈ ಹಿಂದೆ ಹೇಳಿಕೆ ನೀಡಿದ್ದ ರೇವಣ್ಣ ಸಂಸದನಾಗಲೂ ಜಿ.ಎಸ್. ಬಸವರಾಜ್ ಅನ್ಫಿಟ್ ಎಂದು ಹೇಳಿದ್ದರು
ರೇವಣ್ಣ ಅವರ ಹೇಳಿಕೆಗೆ ತುಮಕೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಸಂಸದ ಬಸವರಾಜು, “ಅನ್ಫಿಟ್ ಎಂಬ ಪದದ ಅರ್ಥ ರೇವಣ್ಣನವರಿಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ. ಶಾಸಕನಾಗಿ ಸಚಿವನಾಗಿ ಒಂದು ಕೆರೆಯನ್ನೂ ಸಹ ತುಂಬಿಸಲು ಯೋಗ್ಯತೆ ಇಲ್ಲದ ಆತ ನಿಜವಾದ ಅನ್ಫಿಟ್ ಎಂದು ವ್ಯಂಗ್ಯವಾಡಿದ್ದಾರೆ.
“ಹೇಮಾವತಿ ತುಮಕೂರಿನ ಜನರ ಕುಡಿಯುವ ನೀರಿನ ಮೂಲವಾಗಿದೆ . ಆದರೆ ನೀರು ಹೇಗೆ ತರ್ತೀರೋ ನೋಡೋಣ ಅಂತಾನೆ, ಓರ್ವ ಸಚಿವನಾಗಿ ಕ್ಷೇತ್ರದ ಶಾಸಕನಾಗಿ ಈ ರೀತಿ ಮಾತನಾಡಿದ ರೇವಣ್ಣನಿಗೆ ಮರ್ಯಾದೆ ಇಲ್ಲ” ಎಂದು ಕುಟುಕಿದರು. ಅಲ್ಲದೆ “ನಾನು ಅವರಂತೆ ಸ್ವಾರ್ಥಕ್ಕಾಗಿ ಕೆಲಸ ಮಾಡೋದಿಲ್ಲ. ನನಗೆ ಹೇಮಾವತಿ ಡ್ಯಾಂನ ಕೀ ಕೊಟ್ಟರೆ ಸಾಕು. ನೀರು ಬಿಡುವುದಕ್ಕಿಂತ ಉತ್ತಮ ಕೆಲಸ ಏನಿದೆ” ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ