ಪರಿಸರ ಪ್ರೇಮಿ ಆಗದೆ, ಪರಿಸರ ಆರಾಧಕರಾಗಿ : ಬಿ.ಶಿವಕುಮಾರ್

ತಿಪಟೂರು :

     ಎಲ್ಲರೂ ನಾನು ಪರಿಸರ ಪ್ರೇಮಿ, ನಾನು ಪರಿಸರ ಪ್ರೇಮಿಗಳೆಂದರೆ ಪರಿಸರವನ್ನು ಉಳಿಸಲು ಸಾಧ್ಯವಿಲ್ಲ ಆದರೆ ಎಲ್ಲರೂ ಪರಿಸರ ಆರಾಧಕರಾಗಿ ಪ್ರಕೃತಿಗೆ ತಲೆಬಾಗಿದರೆ ಮಾತ್ರ ಪರಿಸರವನ್ನು ಉಳಿಸಬಹುದೆಂದು 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಶಿವಕುಮಾರ್ ಅಭಿಪ್ರಾಯಪಟ್ಟರು.

     ನಗರದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ, ಶಿಕ್ಷಣ, ತೋಟಗಾರಿಕೆ, ಪೋಲೀಸ್ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರದಿನದ ಪ್ರಯುಕ್ತ ನ್ಯಾಯಾಲಯದ ಆವರಣದಲ್ಲಿ ಸಸಿನೆಟ್ಟು ಶಾಲಾಮಕ್ಕಳ ಜೊತೆಗೆ ನ್ಯಾಯಾಧೀಶರುಗಳು, ಅಧಿಕಾರಿಗಳು ಮತ್ತು ಮಕ್ಕಳು ಜಾತಾ ಕಾರ್ಯಕ್ರಮದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮದು ಚಿಕ್ಕಮಗಳೂರು ಜಿಲ್ಲೆ ಮೊದಲೇ ವನಸಂಪತ್ತು ಹೆಚ್ಚಾಗಿತ್ತು ನಾವು ಎಲ್ಲಾದರೂ ಹೋದರೆ ದಾರಿಯೇ ಕಾಡಿನ ಮಧ್ಯೆ ಮರೆತುಹೋಗಿ ಗೊಂಡಲಕ್ಕೀಡಾಗುತ್ತಿದ್ದು ದಿನಗಳು ನನಗೆ ನೆನಪಿದೆ ಆದರೆ ಈಗು ಕಾಡು ಎಂದರೆ ರಸ್ತೆಪಕ್ಕದಲ್ಲೇ ಇರುವ ಮರಗಳು ಮಾತ್ರ ಉಳಿದಿದೆ.

     ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈಗ ಅಭಿವೃದ್ಧಿ ಎಂದರೆ ಮರಗಳನ್ನು ಕಡಿಯುವುದಾಗಿದೆ, ಉದಾಹರಣಗೆ ತುಮಕೂರು ಶಿವಮೊಗ್ಗ ಹೆದ್ದಾರಿಯಲ್ಲಿ ಸುಮಾರು 3000 ಕಡಿದಿರುವುದನ್ನು ಕಂಡು ಪರಿಸರ ವಿನಾಶದ ಅಂಚಿಗೆ ತಲುಪುತ್ತಿದೆ ಇಂದು ನಾವು ಮತ್ತು ನಮ್ಮ ಹಿಂದಿನ ತಲೆಮಾರಿನವರು ಮಾಡಿದ ತಪ್ಪಿಗಾಗಿ ನೀವಿಂದು ಪರಿಸರ ದಿನವನ್ನು ಆಚರಿಸಿತ್ತಿದ್ದು ಆದರೆ ವಿದ್ಯಾರ್ಥಿಗಳಾದ ನೀವುಗಳು ಈಗಿನಿಂದ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

     ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಅಧ್ಯಕ್ಷರು ತಾ.ಕಾ.ಸೇವಾ ಸಮಿತಿ ತಿಪಟೂರು ಸತೀಶ್.ಎಸ್.ಟಿ.ಮಾತನಾಡಿ ಪರಿಸರ ನಾಶವಾಗುತ್ತಿರುವುದನ್ನು ಮನಗಂಡ 1972ರಲ್ಲಿ ವಿಶ್ವಸಂಸ್ಥೆ ಅಮೇರಿಕಾದ ಸ್ಟಾಕ್‍ಹೋಂ ನಲ್ಲಿ ನಡೆದ ಸಮ್ಮೇಳನದಲ್ಲಿ ಮುಂದಿನ ಸಾಲಿನಿಂದ ಜೂನ್ 05 ಆಚರಿಸಿಕೊಂಡು ಬರುತ್ತಿದ್ದು ಪರಿಸರವನ್ನು ಉಳಿಸಲು ಪಣತೊಟ್ಟಿದೆ. ಗಾಂಧೀಜಿ ಹೇಳುವಂತೆ ಪರಿಸರ ಮಾನವನ ಆಸೆಯನ್ನು ಪೂರೈಸ ಬಲ್ಲದೇ ಹೊರತು ಅತಿಯಾಸೆಯನ್ನಲ್ಲ ಎನ್ನುವಂತೆ ಇಂದು ನಾವು ನಮ್ಮ ಜಮೀನನ್ನು ನೋಡಿಕೊಳ್ಳುವುದನ್ನು ಬಿಟ್ಟು ಪಕ್ಕದ ಅರಣ್ಯವನ್ನು ಒತ್ತುವರಿಮಾಡಿಕೊಂಡು ಪರಿಸರವನ್ನು ನಾಶಮಾಡುತ್ತಿದ್ದೇವೆ ಇದು ತಪ್ಪಿ ನಮ್ಮ ಅತ್ಯವಶ್ಯಕತೆಗೆ ಮಾತ್ರ ಬಳಸಬೇಕು ಎಂದು ತಿಳಿಸಿದರು.

     ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬದುಕು ಸಂಸ್ಥೆಯ ಅಧ್ಯಕ್ಷ ಬಿ.ಎಸ್.ನಂದಕುಮಾರ್ ಪರಿಸರ ನಾಶದ ಪರಿಣಾಮ, ಪರಿಸರವನ್ನು ಹೆಚ್ಚುಸುವುದರಿಂದ ಆಗುವ ಪರಿಣಾಮಗಳನ್ನು ಮಕ್ಕಳಿಗೆ ಸಂಕ್ಷಿಪ್ತವಾಗಿ ವಿವರಿಸಿದರು.ಒಳಗೆ ಪರಿಸರ ರಕ್ಷಣೆ ಹೊರಗೆ ಗುಂಡುಪಾರ್ಟಿಯ ಅವಶೇಷ : ನ್ಯಾಯಾಲಯದ ಆವರಣದ ಒಳಗೆ ಪರಿಸರ ದಿನಾಚರಣೆ ನಡೆಯುತ್ತಿದ್ದು ಜಾತಾಹೋಗುವ ರಸ್ತೆಯಲ್ಲಿ ಅಂದರೆ ನ್ಯಾಯಾಲಯದ ಮುಖ್ಯದ್ವಾರದ ಮುಂದೆಯೇ ಖಾಲಿ ಮದ್ಯದ ಬಾಟಲಿಗಳು ಮತ್ತು ಪಾರ್ಟಿಯ ಅವಶೇಷಗಳು ಪರಿಸರ ಜಾಥಾವನ್ನು ಸ್ವಾಗತಿಸಿದವು.

     ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧಿಶರಾದ ಶಾರದಾ ಕೊಪ್ಪದ, ಅಧಿಕ ಸಿವಿಲ್ ನ್ಯಾಯಾಧೀಶರಾದ ದಾಸರಿ ಕ್ರಾಂತಿಕಿರಣ್, ಕ್ಷೇತ್ರಶಿಕ್ಷಣಾಧಿಕಾರಿ ಮಂಗಳಗೌರಮ್ಮ, ವಕೀಲರ ಸಂಘದ ಕಾರ್ಯದರ್ಶಿ ನಟರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಎಸ್.ಸತ್ಯನಾರಾಯಣ್, ವಲಯ ಅರಣ್ಯಾಧಿಕಾರಿ ರಾಕೇಶ್ ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap