ತಿಪಟೂರು :
ಹೊಸದುರ್ಗ ಜಿಲ್ಲೆ ಗವಿರಂಗನಾಥ ಸ್ವಾಮಿ ಬೆಟ್ಟದ ಸಂತೆಯಿಂದ ತಿಪಟೂರು ನಗರದ ಗಾಂಧಿನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ ಘಟನೆ ನಗರದಲ್ಲಿ ಇಂದು ಬೆಳಗ್ಗೆ ಭಜರಂಗದಳದ ಕಾರ್ಯಕರ್ತರು ಹಿಡಿದಿದ್ದಾರೆ.
ಅಶೋಕ ಲೈಲ್ಯಾಂಡ್ ವಾಹನ ಸಂಖ್ಯೆ ಕೆ.ಎ 13 ಸಿ 5785 ವಾಹನದಲ್ಲಿ ಅಕ್ರಮವಾಗಿ 8 ಗೋವುಗಳು ಮತ್ತು 4 ಕರುಗಳನ್ನು ತುಂಬಿ ಸಾಗಿಸುತ್ತಿದ್ದು, ವಾಹನದಲ್ಲಿ ಹೆಚ್ಚಾಗಿ ಗೋವುಗಳನ್ನು ತುಂಬಿದ್ದರಿಂದ ವಾಹನದಲ್ಲೇ ಒಂದು ಕರುವಿನ ಕಾಲು ಮರಿದಿದ್ದು ಕಂಡು ಬಂದಿತು ಇದಕ್ಕೆ ಸಂಬಂಧಿಸಿದಂತೆ ವಾಹನದ ಚಾಲಕ ಚೇತನ್, ರಂಗನಾಥ್ ಮತ್ತು ಅಶೋಕ ಇವರನ್ನು ವಾಹನದ ಸಮೇತ ಭಜರಂಗದಳದ ಕಾರ್ಯಕರ್ತರು ನಗರಠಾಣೆಗೆ ತಂದು ಒಪ್ಪಿಸಿದ್ದು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.