ನಿಷೇಧಿತ ಪ್ಲಾಸ್ಟಿಕ್ ಮಾರಾಟ : 82,500 ರೂ. ದಂಡ ಸಂಗ್ರಹ

ತುಮಕೂರು

     ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಟಿ.ಭೂಬಾಲನ್, ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಆರೋಗ್ಯ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಜೂನ್ 11 ರಂದು ಬೆಳಗ್ಗೆ ತುಮಕೂರು ನಗರದ ವಿವಿಧ ಮಳಿಗೆಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿರುವುದು, ಫುಟ್‍ಪಾತ್‍ನಲ್ಲಿ ಕಸ ಹಾಕುವುದು ಮತ್ತಿತರ ಕಾನೂನು ಉಲ್ಲಂಘನೆಗಾಗಿ ದಂಡ ವಿಧಿಸಿ ಒಂದೇ ದಿನದಲ್ಲಿ ಒಟ್ಟಾರೆ 82,500 ರೂ. ದಂಡವನ್ನು ಸಂಗ್ರಹಿಸಿದ್ದಾರೆ.

ಯಾರಿಗೆ, ಎಷ್ಟು ದಂಡ?

       ನಗರದ ಎರಡನೇ ವಾರ್ಡ್ ವ್ಯಾಪ್ತಿಯಲ್ಲಿರುವ ವೈ.ಎಚ್.ಕೆ. ಸ್ಟೋರ್ಸ್-25,000 ರೂ., ಅರುಣ್‍ಪ್ರಾವಿಷನ್ ಸ್ಟೋರ್ಸ್- 10,000 ರೂ, ಎಸ್.ಎಲ್.ಆರ್.ಮೋಟಾರ್ಸ್ ಅಂಡ್ ಆಟೋಮೊಬೈಲ್ಸ್- 10,000 ರೂ., ಮಂಜುನಾಥ್-2,000 ರೂ., ಅಕ್ರಂ- 500 ರೂ., ರಾಮಾಂಜಿನಯ್ಯ-500 ರೂ., ಸಿದ್ದೇಶ್ವರ ಆಗ್ರೋ ಕೇಂದ್ರ- 2,000 ರೂ., ಎಸ್.ಎಲ್.ವಿ. ಸ್ಟೋರ್ಸ್- 1,000 ರೂ., ಮಾರುತಿ ಸ್ಟೋರ್ಸ್- 1,000 ರೂ., ಎಂ.ಬಿ.ಟಿ.- 2,000 ರೂ., ಬಿ.ಎಸ್.ಎನ್.ಟ್ರೇಡರ್ಸ್ – 2,000 ರೂ., ನೇತಾಜಿ ಟ್ರೇಡಿಂಗ್ ಕೋ- 500 ರೂ., ವೈ,ಎಚ್.ಎಸ್. ಸ್ಟೋರ್ಸ್- 2,000 ರೂ., ಜೆ.ಎಸ್. ಪ್ರಾವಿಷನ್ ಸ್ಟೋರ್ಸ್- 10,000 ರೂ., ವಿಘ್ನೇಶ್ವರ ಬಾಳೆಹಣ್ಣು ಅಂಗಡಿ-2,000 ರೂ., ಪಾರ್ವತಮ್ಮ-1,000 ರೂ., ಹನುಮಂತರಾಜು- 1,000 ರೂ., ನಗರದ 14 ನೇ ವಾರ್ಡ್ ವ್ಯಾಪ್ತಿಯಲ್ಲಿರುವ ನೇತಾಜಿ ಸ್ಟೋರ್ಸ್- 5,000 ರೂ., ಇತರೆ ಅಂಗಡಿಗಳು- 5,000 ರೂ. – ಈ ರೀತಿ ಒಟ್ಟು 82,500 ರೂ.ಗಳನ್ನು ದಂಡವನ್ನಾಗಿ ಸಂಗ್ರಹಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link