ಮಂಡ್ಯ :
ಮಂಡ್ಯ ಜಿಲ್ಲೆಯ ಪಾಂಡವಪುರ ಕನಗನಮರಡಿಯಲ್ಲಿ ಸಂಭವಿಸಿದ್ದ ಭೀಕರ ಬಸ್ ದುರಂತದಲ್ಲಿ 30 ಜನರು ಮೃತಪಟ್ಟಿದ್ದರು. ಇದೀಗ ಮೃತಪಟ್ಟ 30 ಮಂದಿಯ ಕುಟುಂಬಕ್ಕೆ ಕೇಂದ್ರ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಿಸಿದೆ.
The Government of Karnataka had given a compensation of RS.5 lakh each to the kin of the deceased in the bus accident, Kanaganamaradi, Mandya. The Government of India has also given Rs 2 lakh each to them now.
I thank PM @narendramodi for this kind gesture.— H D Kumaraswamy (@hd_kumaraswamy) June 11, 2019
ಕರ್ನಾಟಕ ಸರ್ಕಾರ ಮಂಡ್ಯ ಕನಗನಮರಡಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ನೀಡಿತ್ತು. ಈಗ ಭಾರತ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ನೀಡಿದೆ. ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕನಗನಮರಡಿ ಬಳಿ ಖಾಸಗಿ ಬಸ್ ಸುಮಾರು 15 ಅಡಿ ಆಳದ ವಿಸಿ ನಾಲೆಗೆ ಉರುಳಿದ ಪರಿಣಾಮ ಮಕ್ಕಳು ಸೇರಿದಂತೆ 30 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಆಗ ಕರ್ನಾಟಕ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಈಗ ಕೇಂದ್ರ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಇದೀಗ ಸಂತ್ರಸ್ತೆ ಕುಟುಂಬದವರಿಗೆ ಒಟ್ಟು 7 ಲಕ್ಷ ರೂ. ಪರಿಹಾರ ಸಿಕ್ಕಿದಂತಾಗಿದೆ.