ಮಿಡಿಗೇಶಿ
ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ತೋಟ ಮಡುಗಲು ಗ್ರಾಮದ ಲಕ್ಷ್ಮೀನರಸಮ್ಮ ಕೋಂ ಪಾತಪ್ಪ ಎನ್ನುವ ಮಹಿಳೆಗೆ 2018-19ನೆ ಸಾಲಿನ ಸಾಮಾನ್ಯ ವರ್ಗದ ಕೋಟಾದಲ್ಲಿ ಸರ್ಕಾರದಿಂದ ಮನೆ ಮಂಜೂರಾಗಿತ್ತು. ಮನೆ ನಿರ್ಮಿಸಲು ಹನುಮಂತಪುರದ ಚಂದ್ರಪ್ಪ ಎನ್ನುವವರಿಗೆ ಗುತ್ತಿಗೆ ನೀಡಲಾಗಿತ್ತು.
ಸದರಿ ಗುತ್ತಿಗೆ ದಾರರಿಗೆ ಸೇರಿದ ಇತ್ತೀಚಿನ ದಿನದ ತೀರುಗಳ್ನನು ಮನೆ ನಿರ್ಮಿಸುವ ಸ್ಥಳಕ್ಕೆ ಕೊಂಡೊಯ್ಯುವಾಗ ಲಕ್ಷ್ಮೀನರಸಮ್ಮನ ಮಗ ನಿಂಗಪ್ಪ (23) ಎನ್ನುವ ಯುವಕನನ್ನು ಆಟೋದಲ್ಲಿ ಕರೆದುಕೊಂಡು (ಆಟೋ ಚಾಲಕ ಮಧು)ಹೋಗುವಾಗ ಜೂನ್ 12 ರಂದು ಬೆಳಿಗ್ಗೆ 8-30 ರ ಸಮಯದಲ್ಲಿ ಆಟೋ ಪಲ್ಟಿ ಹೊಡೆದಿದ್ದು ಆಟೋದಲ್ಲಿ ಕುಳಿತಿದ್ದ ನಿಂಗಪ್ಪನು ಸ್ಥಳದಲ್ಲಿಯೇ ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ.
ಈ ಘಟನೆ ಬಗ್ಗೆ ಮೃತನ ತಂದೆ ಪಾತಪ್ಪನು ಮಿಡಿಗೇಶಿ ಪೋಲೀಸ್ ಟಾಣೆಗೆ ಲಿಖಿತ ದೂರನ್ನು ನೀಡಿದ್ದು ಮಿಡಿಗೇಶಿ ಪೋಲೀಸಿನವರು ಪ್ರಕರಣ ದಾಖಲಿಸಿಕೊಂಡಿದ್ದು ಅಪಘಾತಕ್ಕೀಡಾದ ಆಟೋ ವಶಪಡಿಸಿಕೊಂಡಿದ್ದು ಶವ ಪರೀಕ್ಷೆಯನ್ನು ಮಧುಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನೆರವೇರಿಸಿರುತ್ತಾರೆ.