ತುರುವೇಕೆರೆ
ತಾಲ್ಲೂಕಿನ ಕರ್ನಾಟಕ ರಾಜ್ಯ ನೌಕರರ ಸಂಘದ ಚುನಾವಣೆಯ ನಿರ್ದೇಶಕರ ಆಯ್ಕೆಯು ಇದೇ ಜೂನ್ 13 ರಂದು ನಡೆಯಲಿದೆ.
ತಾಲ್ಲೂಕಿನ ವಿವಿಧ ಇಲಾಖೆಗಳಿಂದ ಒಟ್ಟು 34 ನಿರ್ದೇಶಕರ ಆಯ್ಕೆ ಆಗಬೇಕಿದೆ. ಈಗಾಗಲೇ 20 ನಿರ್ದೇಶಕರುಗಳು ಅವಿರೋಧ ಆಯ್ಕೆಯಾಗಿವೆ.
ಇನ್ನುಳಿದ 14 ನಿರ್ದೇಶಕ ಸ್ಥಾನಗಳಿಗೆ ವಿವಿಧ ಇಲಾಖೆಗಳಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 3 ಸ್ಥಾನಗಳಿಗೆ 6 ಸ್ಪರ್ಧಿಗಳು, ಆರೋಗ್ಯ ಇಲಾಖೆಯಲ್ಲಿ 4 ಸ್ಥಾನಕ್ಕೆ 8 ಸ್ಪರ್ಧಿಗಳು, ಪ್ರೌಢಶಾಲಾ ಸಂಘದಿಂದ 1 ಸ್ಥಾನಕ್ಕೆ 4 ಜನ ಸ್ಪರ್ಧೆ, ಪದವಿ ಪೂರ್ವ ಕಾಲೇಜುಗಳಿಂದ 1 ಸ್ಥಾನಕ್ಕೆ 2 ಸ್ಪರ್ಧೆ, ಪದವಿ ಕಾಲೇಜು 1 ಸ್ಥಾನಕ್ಕೆ 2 ಸ್ಪರ್ಧಿಗಳಿದ್ದಾರೆ. ನೀರಾವರಿ ಇಲಾಖೆಯಿಂದ 2 ಸ್ಥಾನಕ್ಕೆ 4 ಸ್ಪರ್ಧಿಗಳು, ತಾಲ್ಲೂಕು ಪಂಚಾಯಿತಿ 2 ಸ್ಥಾನಕ್ಕೆ 4 ಸ್ಪರ್ಧಿಗಳು ಸೇರಿ ಒಟ್ಟು 30 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತಗಟ್ಟೆ ಹಾಗೂ ಸಮಯ : ಪಟ್ಟಣದ ಸರ್ಕಾರಿ ಬಾಲಕರ ಪಾಠ ಶಾಲೆಯಲ್ಲಿ ಗುರುವಾರ ಬೆಳಗ್ಗೆ 11 ರಿಂದ 4 ಗಂಟೆಯವರೆಗೆ ಚುನಾವಣೆ ನಡೆದು ಅಂದೇ 5 ಗಂಟೆಯ ನಂತರ ಮತ ಎಣಿಕೆ ಕಾರ್ಯ ಹಾಗೂ ಫಲಿತಾಂಶ ಹೊರಬೀಳಲಿದೆ.
ಚುನಾವಣೆಯ ಅಭ್ಯರ್ಥಿಗಳು:
ಪ್ರಾಥಮಿಕ ಶಿಕ್ಷಣದಿಂದ ಸಾ.ಶಿ.ದೇವರಾಜ್, ನಂ.ರಾಜು, ಎಚ್.ಸಿ.ನಾಗರಾಜ್, ಎಂ.ಎನ್.ರಾಜು, ಜಿ.ಕಂಚಿರಾಯ ಮತ್ತು ರಾಮಚಂದ್ರು, ಪ್ರೌಢ ಶಾಲಾ ಸಂಘದಿಂದ ಚಂದ್ರಯ್ಯ, ಎಂ.ಬಿ.ಲೋಕೇಶ್, ಬಿ.ಶಚೀಂದ್ರನ್, ಸಿದ್ದಪ್ಪ, ಪದವಿ ಪೂರ್ವ ಕಾಲೇಜುಗಳಿಂದ ವಿ.ಎನ್.ನಂಜೇಗೌಡ, ಬಿ.ಆರ್.ರಂಗಯ್ಯ, ಪದವಿ ಕಾಲೇಜು ಸಂಘದಿಂದ ಜಿ.ಗಂಗಾಧರಯ್ಯ, ಡಿ.ಸಿ.ಮಂಜುನಾಥ್, ನೀರಾವರಿ ಇಲಾಖೆ ಜಿ.ಬಿ.ಚಂದ್ರಶೇಖರಯ್ಯ, ಜಿ.ಎಂ.ಜಗದೀಶ್, ಮಂಜಣ್ಣ ಮತ್ತು ಶ್ರೀನಿವಾಸ್, ಆರೋಗ್ಯ ಇಲಾಖೆಯಿಂದ ಎನ್.ಬೋರೇಗೌಡ, ಎಂ.ವಿ. ಗಿಡ್ಡೇಗೌಡ, ಕೆ.ಎನ್.ಜಗದೀಶ್, ಎಂ.ಎಸ್.ಕೃಷ್ಣೇಗೌಡ, ಎಚ್.ಎಂ.ಮಂಜುನಾಥ್, ಕೆ.ಎಸ್.ಸದಾಶಿವಯ್ಯ, ಕೆ.ವೆಂಕಟೇಶ್, ಯತಿರಾಜು, ತಾಲ್ಲೂಕು ಪಂಚಾಯಿತಿಯಿಂದ ಎಂ.ಎಲ್.ಚಂದ್ರಶೇಖರ್, ಜಿ.ಎಸ್.ನರೇಂದ್ರ, ಪುರುಷೋತ್ತಮ್ ಮತ್ತು ಜಿ.ಉಮೇಶ್ ಕಣದಲ್ಲಿದ್ದಾರೆ.
ಅವಿರೋಧ ಆಯ್ಕೆಯಾದ ನಿರ್ದೇಶಕರು:
ಎ.ಆರ್.ಗಿರೀಶ್ (ಕೃಷಿ), ಬಾಲಾಜಿ(ಪಶುಸಂಗೋಪನೆ),ಕಿರಣ್ಕುಮಾರ್(ಆಹಾರ ಇಲಾಖೆ), ನವೀನ್ಕುಮಾರ್ ಮತ್ತು ಪರಮೇಶ್ (ಕಂದಾಯ), ಸತೀಶ್(ಲೋಕೋಪಯೋಗಿ), ವೀರಪ್ರಸನ್ನ(ಕುಡಿಯುವನೀರು ಸರಬರಾಜು), ಮಂಜುನಾಥ್ (ಸಮಾಜಕಲ್ಯಾಣ), ಶಂಕರನಾರಾಯಣ (ಹಿಂದುಳಿದ ಮತ್ತು ಅಲ್ಪಸಂಖ್ಯಾತ), ರಾಮ(ಅಬಕಾರಿ), ಶಿವಪ್ರಸಾದ್(ತೋಟಗಾರಿಕೆ), ಜಯರಾಮ್(ರೇಷ್ಮೆ), ತ್ರಿನೇಷ್(ಖಜಾನೆ), ನಟೇಶ್(ಭೂಮಾಪನ), ಶಂಕರ್(ಮುದ್ರಾಂಕಿತ), ಮಂಜಣ್ಣ(ಎಪಿಎಂಸಿ), ಚಂದ್ರಹಾಸ(ನ್ಯಾಯಾಂಗ), ಆನಂದ್ಕುಮಾರ್(ಸಿಡಿಪಿಓ), ರಂಗನಾಥಯ್ಯ (ಸರ್ಕಾರಿ ಪಾಲಿಟೆಕ್ನಿಕ್), ನಟರಾಜ್(ಕೈಗಾರಿಕಾ ತರಬೇತಿ ಸಂಸ್ಥೆ) ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಪ್ರಾಣೇಶ್ ತಿಳಿಸಿದ್ದಾರೆ.