ಪಾಕಿಸ್ತಾನ ಟಿವಿ ಜಾಹೀರಾತಿಗೆ ಸಾನಿಯಾ ಮಿರ್ಜಾ ಕಿಡಿ ಕಾರಿದ್ದಾರೆ

ಹೈದರಾಬಾದ್:

 ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿಯೂ ಆಗಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನ ವಾಹಿನಿಯಲ್ಲಿ ಭಾರತ-ಪಾಕ್ ಕ್ರಿಕೆಟ್ ಹಿನ್ನಲೆಯಲ್ಲಿ ಭಾರತೀಯ ವಾಯುಸೇನಾ ಕಮಾಂಡರ್ ಅಭಿನಂದನ್ ಜೈನ್ ರನ್ನು ಲೇವಡಿ ಮಾಡುವಂತಹ ಜಾಹೀರಾತು ಪ್ರಕಟಿಸಿದ್ದಕ್ಕೆ ಕಿಡಿ ಕಾರಿದ್ದಾರೆ.

ಭಾರತ ಮತ್ತು ಪಾಕ್ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ ಇಂತಹ ಅನಗತ್ಯ ಜಾಹೀರಾತುಗಳ ಅಗತ್ಯವಿದೆಯೇ? ಇದು ಕೇವಲ ಕ್ರಿಕೆಟ್ ಅಷ್ಟೇ. ಅನಗತ್ಯವಾಗಿ ಇಂತಹ ವಿವಾದಾತ್ಮಕ ಜಾಹೀರಾತುಗಳ ಮೂಲಕ ಮಾರ್ಕೆಟಿಂಗ್ ಮಾಡುವ ಅಗತ್ಯವಿಲ್ಲ ಎಂದು ಸಾನಿಯಾ ಪಾಕ್ ಜಾಹೀರಾತಿಗೆ ಕಿಡಿ ಕಾರಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ