ಛತ್ತೀಸ್ ಗಡ :
ನಕ್ಸಲೀಯರು ಮತ್ತು ಜಿಲ್ಲಾ ಮೀಸಲು ಪಡೆ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ.
ರಾಜಧಾನಿ ರಾಯ್‍ಪುರ್‍ನಿಂದ ಸುಮಾರು 200 ಕಿಮೀ ದೂರವಿರುವ ಟಡೊಕಿ ಪೊಲೀಸ್ ಠಾಣೆ ಪ್ರದೇಶದ ಮಾಲೆಪರ ಮತ್ತು ಮರ್ನಾರ್ ಗ್ರಾಮಗಳ ನಡುವೆ ದಟ್ಟ ಅರಣ್ಯದಲ್ಲಿ ಇಂದು ನಸುಕಿನ ಜಾವ ಈ ಘಟನೆ ನಡೆದಿದೆ, ಟಡೊಕಿ ಪೊಲೀಸ್ ಠಾಣೆ ವಲಯದ ದಟ್ಟ ಅರಣ್ಯದಲ್ಲಿ ಎನ್ ಕೌಂಟರ್ ನಡೆದಿದ್ದು ಇಬ್ಬರು ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯ ಡಿಐಜಿ ಪಿ ಸುಂದರ್ ರಾಜ್ ತಿಳಿಸಿದ್ದಾರೆ.
ಎನ್ ಕೌಂಟರ್ ನಡೆದ ಪ್ರದೇಶದಿಂದ ಎರಡು ಎಸ್‌ಎಲ್‌ಆರ್ ರೈಫಲ್ಸ್, ಒಂದು 303 ರೈಫಲ್ ಮತ್ತು 315 ರೈಫಲ್ ಹಾಗೂ ಇನ್ನೂ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
