ತಮಿಳು ನಾಡಿನ ರೈತರಿಗೆ 3000 ಮಾವಿನ ಸಸಿ ವಿತರಿಸಿದ ಜಪಾನಂದಜಿ

ಪಾವಗಡ

     ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ ಮತ್ತು ಇನ್ಫೋಸಿಸ್ ಫೌಂಡೇಶನ್‍ರವರ ಸಹಯೋಗದೊಂದಿಗೆ ಕಳೆದ ವರುಷ ನವೆಂಬರ್ ತಿಂಗಳಿನಲ್ಲಿ ತಮಿಳು ನಾಡಿನ ಕರಾವಳಿ ಪ್ರದೇಶವಾದ ನಾಗಪಟ್ಟಣಂ ಜಿಲ್ಲೆಯು ಗಜ ಚಂಡಮಾರುತದಿಂದ ಸಂಪೂರ್ಣವಾಗಿ ತತ್ತರಿಸಿಹೋಗಿತ್ತು.

     ಆ ಸಂದರ್ಭದಲ್ಲಿ ಪರಿಹಾರ ಕಾರ್ಯವನ್ನು ಕೈಗೊಂಡ ಸ್ವಾಮಿ ಜಪಾನಂದಜಿ ಕಡುಬಡವರ ಹಾಗು ಕರಾವಳಿ ತೀರದಲ್ಲಿ ತೆಂಗು ಹಾಗು ಗೋಡಂಬಿ ಕೃಷಿಯನ್ನೇ ನಂಬಿದವರಿಗೆ ಮುಂಗಾರು ಆರಂಭವಾದ ಸಮಯದಲ್ಲಿ ತೆಂಗು, ಗೋಡಂಬಿ ಹಾಗು ಮಾವಿನ ಸಸಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.

     ಈಗ ಆ ಭರವಸೆಯನ್ನು ಈಡೇರಿಸುವ ಕಾರ್ಯವನ್ನು ಕೈಗೆತ್ತಿಕೊಂಡರು. ಸರಿ ಸುಮಾರು 3000 ವಿವಿಧ ರೀತಿಯ ಉತ್ತಮ ಗುಣಮಟ್ಟದ ಸಸಿಗಳನ್ನು ಸುಮಾರು ಐವತ್ತು ಎಕರೆ ಪ್ರದೇಶದಲ್ಲಿ ಸ್ಥಳೀಯ ರೈತಾಪಿ ಮುಖಂಡರು ಹಾಗು ಜನಪರವಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ದಕ್ಷ ಪೋಲೀಸ್ ಸೂಪರಿಂಟೆಂಡೆಂಟ್ ವಿಜಯಕುಮಾರನ್ ಅವರ ಅಮೂಲ್ಯ ಸಹಕಾರದಿಂದ ಸಾಕಾರಗೊಳಿಸಿದರು.

     ವೇಟ್ಟಕಾರಣವೀಡು, ನಾಗಪಟ್ಟಣಂ ಜಿಲ್ಲೆಯಲ್ಲಿನ ಸ್ಥಳೀಯ ಒಂದು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ರೈತಬಾಂಧವರು ಈ ಹಸಿರು ಯೋಜನೆಗೆ ಸಾಕ್ಷಿಯಾದರು. ಸ್ಥಳೀಯ ಮಂತ್ರಿಗಳಾದ ಓ.ಯಸ್ .ಮಣಿಯನ್, ಜವಳಿ ಇಲಾಖೆಯ ಮಂತ್ರಿಗಳು ಪೂಜ್ಯಸ್ವಾಮೀಜಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿರುವುದು ಬಡ ರೈತರಿಗೆ ಸಮಾಧಾನ ತಂದಿದೆ. ಒಟ್ಟಾರೆ ಸ್ವಾಮೀಜಿ ಅಹರ್ನಿಶಿ ಬಡಜನರಿಗಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆನಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link