ಜಮ್ನಾಗರ್:
ಕಸ್ಟಡಿಯಲ್ಲಿ ಖೈದಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಂಜೀವ್ ಭಟ್ ರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಾಮ್ನಗರ್ ಸೆಶನ್ ಕೋರ್ಟ್ ತೀರ್ಪು ನೀಡಿದೆ.
1990ರಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಾಮ್ನಗರಕ್ಕೆ ನೇಮಕಗೊಂಡಾಗ ಸಂಜೀವ್ ಭಟ್ ಅವರು ಕೋಮುಗಲಭೆಗೆ ಸಂಬಂಧಿಸಿದಂತೆ 150 ಮಂದಿಯನ್ನು ಬಂಧಿಸಿದ್ದರು. ಇವರಲ್ಲಿ ಪ್ರಭುದಾಸ್ ವೈಷ್ಣವಿ ಎಂಬುವವರು ಬಿಡುಗಡೆಗೊಂಡ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದೇ ಆತನ ಸಾವಿಗೆ ಕಾರಣ ಎಂದು ಆರೋಪಿಸಿ ವೈಷ್ಣವಿ ಅವರ ಸಹೋದರ ಭಟ್ ಅವರು, ಸಂಜೀವ್ ಭಟ್ ಹಾಗೂ ಇತರ 6 ಮಂದಿ ಪೊಲೀಸರ ಮೇಲೆ ದೂರು ನೀಡಿದ್ದರು. ಅಂದು ಸಂಜೀವ್ ಭಟ್ ಜಾಮ್ನಗರದಲ್ಲಿ ಎಎಸ್ಪಿ ಆಗಿದ್ದರು.
1990ರಲ್ಲಿ ಸಂಭವಿಸಿದ್ದ ತಮ್ಮ ಕಸ್ಟಡಿಯಲ್ಲಿದ್ದ ವ್ಯಕ್ತಿಯ ಸಾವಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ಸಂಜೀವ್ ಭಟ್ ಅವರಿಗೆ ಗುಜರಾತ್ ನ ಜಾಮ್ ನಗರ ಕೋರ್ಟ್ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಮತ್ತೋರ್ವ ಅಧಿಕಾರಿ ಪ್ರವೀಣ್ ಸಿಂಗ್ ಝಾಲಾ ಅವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
