ಮಧ್ಯಪ್ರದೇಶ:
72 ವರ್ಷದ ಕಿಷನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ರಸ್ತೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು.
ಚತರ್ಪುರ ಜಿಲ್ಲೆಯ ನೌಗಾಂವ್ ನಿವಾಸಿ ಕಿಷನ್ ಅವರನ್ನು ಬಿನಾ ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದಾಗ ಸತ್ತುಹೋಗಿರುವುದಾಗಿ ವೈದ್ಯರು ಘೋಷಿಸಿದ್ದರು. ಆದರೆ, ಮಾರನೇ ದಿನ ಶವಾಗಾರದಿಂದ ಕಿಷನ್ ಅವರ ದೇಹವನ್ನು ತೆಗೆಯುವ ವೇಳೆ ಅವರು ದ್ದುದು ಗಮನಕ್ಕೆ ಬಂದಿತು.
ಈ ಬಗ್ಗೆ ಪೊಲೀಸರಿಗೆ ಪತ್ರವನ್ನೂ ಕಳುಹಿಸಿದ್ದರು. ಅಸಲಿಗೆ ಆ ವ್ಯಕ್ತಿ ಸತ್ತೇ ಇರಲಿಲ್ಲ. ಮಾರನೇ ದಿನ ಬೆಳಗ್ಗೆ ಪೊಲೀಸರು ತಪಾಸಣೆಗೆಂದು ಶವಾಗಾರಕ್ಕೆ ಬಂದಾಗ ಆ ವ್ಯಕ್ತಿ ಉಸಿರಾಡುತ್ತಿದ್ದರು. ಬಳಿಕ, ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆ ದಿನ ಸಂಜೆ ಸಾವನ್ನಪ್ಪಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ