ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಸುವವರ ಮೇಲೆ ಕ್ರಮಕ್ಕೆ ಒತ್ತಾಯ

ಹುಳಿಯಾರು

    ಹುಳಿಯಾರಿನ ಬಹುತೇಕ ಹೋಟೆಲ್‍ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆ ಬಳಸುತ್ತಿದ್ದು ಇವರ ಮೇಲೆ ಕ್ರಮ ಕೈಗೊಂಡು ಜನಸಾಮಾನ್ಯರ ಆರೋಗ್ಯ ಕಾಪಾಡುವಂತೆ ಹುಳಿಯಾರು ಕರವೇ ಸಂಘಟನಾ ಕಾರ್ಯದರ್ಶಿ ನವೀನ್ ಒತ್ತಾಯಿಸಿದ್ದಾರೆ.

     ಹುಳಿಯಾರಿನಲ್ಲಿ ಎಲ್ಲೆಂದರಲ್ಲೇ ಹೋಟೆಲ್‍ಗಳು ತಲೆಯೆತ್ತಿವೆ. ಮಳೆಬೆಳೆ ಕೈಕೊಟ್ಟಿರುವ ಈ ಕಾಲದಲ್ಲಿ ಹೊಟ್ಟೆಪಾಡಿಗಾಗಿ ಹೋಟೆಲ್ ಮೂಲಕ ಸ್ವಉದ್ಯೋಗ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಬಹುತೇಕ ಹೋಟೆಲ್‍ಗಳಲ್ಲಿ ಶುದ್ಧ ನೀರು ಕೊಡುತ್ತಿಲ್ಲ. ಅಲ್ಲದೆ ಸ್ವಚ್ಚತೆ ಕಾಣದಾಗಿದೆ ಎಂದು ಆರೋಪಿಸಿದರು.

      ಬಹುಮುಖ್ಯವಾಗಿ ಹೋಟೆಲ್‍ಗಳಲ್ಲಿ ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ಮೇಲೆ ಇಡ್ಲಿ ಬೇಯುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಪ್ಲಾಸ್ಟಿಕ್‍ನಲ್ಲಿರುವ ಹಾನಿಕಾರಕ ಅಂಶಗಳು ಆಹಾರ ಪದಾರ್ಥಕ್ಕೆ ವರ್ಗಾವಣೆ ಯಾಗುತ್ತವೆ. ಈ ಆಹಾರ ಸೇವಿಸಿದವರು ಕ್ಯಾನ್ಸರ್‍ಗೆ ತುತ್ತಾಗುವ ಸಾಧ್ಯತೆ ಹೆಚ್ಚು.

   ಹಾಗಾಗಿ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಪಪಂ ಅಧಿಕಾರಿಗಳು ಇಡ್ಲಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಹಾಗೂ ಶುದ್ಧ ನೀರು ಕೊಡುವಂತೆಯೂ, ಸ್ವಚ್ಚತೆ ಕಾಪಾಡುವಂತೆಯೂ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap