ಚಿತ್ರದುರ್ಗ
ಶೌಚಾಲಯ ನಿರ್ಮಾಣದ ಹೆಸರಲ್ಲಿ ಕೋಟಿಗಟ್ಟಲೆ ಹಣವನ್ನು ದೋಚಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಈ ಸಂಬಂಧ ಮೂರು ಜನರ ಸಮಿತಿಯನ್ನು ರಚಿಸಿ ಎರಡು ತಿಂಗಳ ಒಳಗೆ ವರದಿ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಜಿಲ್ಲಾ ಪಂಚಾಯಿತಿ ಸಿಒಓಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಇಂದು ವೆಂಕಟರಮಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಕೇವಲ ಪತ್ರಗಳಲ್ಲಿ ಮಾತ್ರ ಇದ್ದು, ಆದರೆ ಹಣ ಪಡೆದುಕೊಳ್ಳಲಾಗಿದೆ ಎಲ್ಲಿಯೂ ಸಹ ಶೌಚಾಲಯ ನಿರ್ಮಾಣ ಮಾಡಿಲ್ಲ. ಹಣ ತೆಗೆದುಕೊಳ್ಳವ ನೆಪದಲ್ಲಿ ಶೌಚಾಲಯ ನಿರ್ಮಾಣ ಯೋಜನೆ ತೆಗೆದುಕೊಳ್ಳಲಾಗಿದೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರಸ್ತಾಪ ಮಾಡಿದರು ಇದಕ್ಕೆ ಸಂಸದ ನಾರಾಯಣಸ್ವಾಮಿ, ಶಾಸಕ ತಿಪ್ಪಾರೆಡ್ಡಿ, ಪೂರ್ಣಿಮ ಶ್ರೀನಿವಾಸ್ ಧ್ವನಿಗೂಡಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ವೆಂಕಟರಮಣಪ್ಪ, ಬಹುತೇಕ ಶಾಸಕರು ಆರೋಪ ಮಾಡುತ್ತಿರುವುದರಿಂದ ಈ ಬಗ್ಗೆ ತನಿಖೆ ನಡೆಸಿ ಎರಡು ತಿಂಗಳ ಒಳಗೆ ವರದಿ ನೀಡಬೇಕು ಮತ್ತು ಇದಕ್ಕೆ ಆಯಾ ಪಂಚಾಯಿತಿಯ ಕಾರ್ಯ ನಿರ್ವಹಕ ಅಧಿಕಾರಿಗಳಳು ಮತ್ತು ಪಂಚಾಯತ್ ಅಧಿಕಾರಿಗಳು ಸಹಕಾರ ನೀಡಬೇಕೆಂದು ಸೂಚಿಸಿದರು.
ಕುಡಿಯುವ ನೀರಿನ ಪೂರೈಕೆಗೆ ಅನುಕೂಲ ಆಗಲೆಂದು ಹೊಸದುರ್ಗ ತಾಲ್ಲೂಕಿನಲ್ಲಿ ಕೊಳವೆ ಭಾವಿ ಕೊರೆಸಿದರೆ ಸಿಇಓ ಅವರು ಯಾರನ್ನು ಕೇಳಿ ಕೊರೆಸಿದಿರಿ ಎಂದು ಪ್ರಶ್ನೆ ಮಾಡುತ್ತಾರೆ. ಸಮಸ್ಯೆ ಬಗೆಹರಿಸಬೇಕಾದವರೆ ಹೀಗೆ ಕೇಳಿದರೆ ಹೇಗೆ ಎಂದು ಪ್ರಶ್ನಿಸಿದರು. ಅಲ್ಲದೆ ಹಳ್ಳಿಗಳಲ್ಲಿ ಜನರು ಕಲ್ಲಲ್ಲಿ ಹೊಡೆಯುವುದು ಒಂದೆ ಬಾಕಿ ಅಷ್ಟೊಂದು ಕು.ನೀ ಅಭಾವ ಇದೆ ಇದಕ್ಕೆ ಏನು ಹೇಳುತ್ತಿರಾ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಸಚಿವರು ಸಿಇಓ ಅವರೇ ಸಮಸ್ಯೆ ಇದ್ದಾಗ ಕೆಲವೊಮ್ಮೆ ಕೊಳವೆ ಭಾವಿ ಕೊರೆಸಬೇಕಾಗುತ್ತದೆ. ಇದಕ್ಕೆ ಯಾವುದೇ ಪ್ರಶ್ನೆ ಮಾಡಬಾರದು ಎಂದು ತಾಕೀತು ಮಾಡಿದರು.
ಮೊಳಕಾಲ್ಮೂರು ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರುಗಳು ಇಲ್ಲದೆ ಸುಮಾರು 90% ಮಹಿಳೆಯರು ಹೆರಿಗೆಗಾಗಿ ಬಳ್ಳಾರಿ ಜಿಲ್ಲೆಗೆ ಹೊಗುವ ಪರಿಸ್ಥಿತಿ ಇದೆ ಇದು ಕೂಡಲೇ ಬದಲಾಗಬೇಕು ಎಂದು ಶಾಸಕ ಬಿ.ಶ್ರೀರಾಮುಲು ಒತ್ತಾಯಿಸಿದರು. ಇದಕ್ಕೆ ಸಚಿವ ವೆಂಕಟರ ಮಣಪ್ಪ ಕೂಡಲೇ ಅರ್ಜಿಗಳನ್ನು ಕರೆದು ಅಲ್ಲೆಗೆ ವೈದ್ಯರನ್ನು ನೇಮಿಸಿ ಸಮಸ್ಯೆ ಬಗೆಹರಿಸಬೇಕೆಂದು ಸೂಚನೆ ನೀಡಿದರು.ಶೇಂಗಾ ಬೀಜ ಕಳಪೆ ಬರುತ್ತೆದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಬಿತ್ತನೆ ಬೀಜ ಎನಾದರೂ ಕಳಪೆ ಬಂದರೆ ಮೊದಲು ನಿಮ್ಮನ್ನು ಅಮಾನತ್ತು ಮಾಡಬೇಕಾಗುತ್ತದೆ ಎಚ್ಚರ ವಹಿಸಿ ಕೆಲಸ ಮಾಡಿ ಎಂದು ಜಿಲ್ಲಾ ಸಚಿವರು ಕೃಷಿ ಇಲಾಖೆ ಡಿಡಿ ಅವರಿಗೆ ಎಚ್ಚರಿಸಿದರು.
ಬ್ಯಾಂಕ್‍ಗಳಿಗೆ ರೈತರಿಗೆ ಬಂದಿರುವ ಸಬ್ಸಿಡಿ ಹಾಗೂ ಬೆಳೆ ಪರಿಹಾರ ಹಣವನ್ನು ಸಾಲದ ಬಾಕಿಗೆ ಮುರಿದುಕೊಳ್ಳುತ್ತಿದ್ದಾರೆ ಇದು ಸರಿ ಅಲ್ಲ. ಬೀಜ ಗೊಬ್ಬರ ತೆಗೆದುಕೊಳ್ಳಲೆಂದು ಕೇಂದ್ರ ಸರ್ಕಾರ ರೈತರ ಅಕೌಂಟಿಗೆ ಹಾಕಿರುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಮುರಿದುಕೊಳ್ಳಬಾರದು ಎಂದು ಶಾಸಕ ಚಂದ್ರಪ್ಪ ಸಭೆಯ ಗಮನಕ್ಕೆ ತಂದರು ಈ ಬಗ್ಗೆ ಎಲ್ಲಾ ಬ್ಯಾಂಕ್‍ಗಳಿಗೂ ಆದೇಶ ಹೊರಡಿಸಬೇಕು ಯಾವ ರೈತರ ಸಬ್ಸಿಡಿ ಹಣವನ್ನು ಹಿಡಿಯಬಾರದು ಎಂದು ಸೂಚನೆ ನೀಡಿ ಎಂದಾಗ ಶಾಸಕ ಗೂಳಿಹಟ್ಟಿ ಶೇಖರ್ ಇದಕ್ಕೆ ಧ್ವನಿಗೂಡಿಸಿ ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಸಾಲ ನೀಡದಿದ್ದರೆ ಆಯಾ ಬ್ಯಾಂಕ್‍ಗಳ ಮೇಲೆ ಜಾತಿ ನಿಂದನೆ ದೂರು ಹಾಕಲಾಗುವುದು ಎಂದು ಕಿಡಿಕಾರಿದರು.
ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಎಲ್ಲಾ ಕೆಲಸಗಳನ್ನು ನಿರ್ಮಿತಿ ಕೇಂದ್ರಕ್ಕೆ ನೀಡಿದರೂ ಇದೂವರೆಗೂ ಒಂದು ಕೆಲಸವನ್ನು ಪ್ರಾರಂಭ ಮಾಡಿಲ್ಲಾ ಅಲ್ಲದೆ ಫೋನ್ ಮಾಡಿದರು ಉತ್ತರ ನೀಡುವುದಿಲ್ಲ ಎಷ್ಟು ದುರಹಂಕಾರ ಇದೆ ನಿನಗೆ ಎಂದು ಶಾಸಕ ಬಿ.ಶ್ರೀರಾಮುಲು ಮೂಡಲಗಿರಿಯಪ್ಪ ವಿರುದ್ದ ಕಿಡಿಕಾರಿದರು.
ಆಗ ಇದಕ್ಕೆ ಧ್ವನಿಗೂಡಿಸಿದ ಸಂಸದ ನಾರಾಯಣಸ್ವಾಮಿ ಶಾಸಕರ ಮಾತಿಗೆ ಸ್ಪಂದನೆ ಮಾಡದೆ ಇದ್ದರೆ ಹಾರಿಕೆ ಉತ್ತರ ನೀಡಿದರೆ ಕಚೇರಿಗೆ ಬೀಗ ಹಾಕಿ ಓಡಿಸಬೇಕಾಗುತ್ತದೆ ಎಚ್ಚರದಿಂದ ಕೆಲಸ ಮಾಡಬೇಕು ಎಂದು ನಿರ್ಮಿತಿ ಕೇಂದ್ರದ ಮೂಡಲಗಿರಿಯಪ್ಪಗೆ ತಾಕೀತು ಮಾಡಿದಾಗ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ವೆಂಕಟರಮಪ್ಪ ಜನವರಿ ತಿಂಗಳ ಒಳಗೆ ಜಿಲ್ಲೆಯ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.