ತಿಪಟೂರು :
ಗುಂಡ್ಲುಪೇಟೆಯಲ್ಲಿ ಅಮಾನುಷವಾಗು ಪ್ರತಾಪ್ ಎನ್ನುವ ಯುವಕನ ಮೆರವಣಿಗೆ ಮತ್ತು ಹಾಸನ ಜಿಲ್ಲೆಯಲ್ಲಿ ಅಲೆಮಾರಿ ಶಿಳ್ಳೆಖ್ಯಾತ ಹೆಣ್ಣುಮಗಳಮೇಲಿನ ಅತ್ಯಾಚಾರವನ್ನು ಖಂಡಿಸಿ ಇಂದು ದಲಿತ ಸಂಘರ್ಷ ಸಮಿತಿ ಮತ್ತು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಜನಪರ ಹೋರಾಟಗಾರ ರಾಜಣ್ಣ ಮಾತನಾಡಿ ಇತ್ತೀಚೆಗೆ ಚಾಮರಾಜನಗರದ ಕಬ್ಬೆಘಟ್ಟ ಗ್ರಾಮದ ದಲಿತ ಯುವ ಪ್ರತಾಪ್‍ರನ್ನು ಬೆತ್ತಲೆ ಮಾಡಿ ಕೈಗಳಿಗೆ ಹಗ್ಗವನ್ನು ಕಟ್ಟಿ ಹಲ್ಲೆಮಾಡಿ ಮೆರವಣಿಗೆ ಮಾಡಿರುವುದು ಮನುವಾದಿ ಪೈಶಾಚಿಕ ಕೃತ್ಯ ಇದು ಮಾನವಕುಲಕ್ಕೆ ಅಪಮಾನವಾಗುತ್ತದೆ ಈ ಕೃತ್ಯವೆಸಗಿದ ಮನುವಾದಿಗಳು ಈ ರಾಜ್ಯದ ದಲಿತರಿಗೆ ಮಾಡಿದ ಘೋರ ಅಪರಾಧ ವಾಗಿರುತ್ತದೆ.
ಅಷ್ಟೆ ಅಲ್ಲದೇ ಪ್ರತಾಪ್ ಐ.ಎ.ಎಸ್ ಪರೀಕ್ಷೆ ಬರೆಯುವ ಒಬ್ಬ ಮೇಧಾವಿ ಯುವಕನಾಗಿದ್ದು ಅಂಥವನ ವಿರುದ್ದವೇ ಆತ ಮಾನಸಿಕ ಅಸ್ವಸ್ಥ ಎಂದು ಹೇಳಿಕೊಟ್ಟಿರುವುದು ಆಶ್ಚರ್ಯವನ್ನು ಉಂಟು ಮಾಡಿದೆ ಎಂದು ತಿಳಿಸಿದ ಅವರು ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಮೂಮದೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಸಂಭವಿಸಬಾರದು ಎಮದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅವರು ದಲಿತರು ಕೇವಲ ಶೋಷಣೆಗೆ ಒಳಗಾದವರಲ್ಲಿ ತಿರುಗಿಬಿದ್ದರೆ ದಲಿತರು ಒಂದು ಶಕ್ತಿ ಎಂಬುದನ್ನು ತೋರಿಸಬೇಕು.
ಇಷೇ ಅಲ್ಲದೇ ಹಾಸನದಲ್ಲಿ ಶಿಳ್ಳೆಕ್ಯಾತ ಹೆಣ್ಣು ಮಗಳ ಮೇಲೆ ರವಿ ಎಂಬ ಪುಂಡನಿಂದ ಲೈಂಗಿಕ ಅತ್ಯಾಚಾರ ನಡೆದಿದ್ದರೂ ಸಹ ಪೋಲಿಸ್ ಇಲಾಖೆ ಯಾವುದೇ ಮುಲಾಜಿಗೆ ಒಳಗಾಗಿ ನೆಪಮಾತ್ರಕ್ಕೆ ಕೇಸು ದಾಖಲಿಸಿಕೊಂಡು ಮತ್ತೆ ಪುಂಟರನ್ನು ಪುಂಡಾಟಿಕೆ ಮಾಡಲಿಕ್ಕೆ ಅವಕಾಶ ಮಾಡಿಕೊಡುವ ರೀತಿಯಲ್ಲಿ ವರ್ತಿಸುತ್ತಿರುವುದು ದಲಿತರಲ್ಲಿ ಅನುಮಾನ ಮೂಡುವಂತೆ ಮಾಡಿದೆ. ಕಾನೂನಿನ ಕುಣಿಕೆಗಳು ಬಿಗಿಯಾದ ಹೊರತು ಜೀನಪರ ಸರ್ಕಾರಗಳು ಆಡಳಿತ ನಡಸಿದರೂ ಇಂತಹ ಕೃತ್ಯಗಳು ಸದಾ ನಡೆಯುತ್ತಿರುತ್ತವೆ ಇದು ಸಂಪೂರ್ಣವಾಗಿ ನಿಲ್ಲಬೇಕೆಂದು ತಿಳಿಸಿದರು.
ಕರ್ನಾಟಕ ದಲಿತಪರ ಸಂಘಟನೆಗಳು ಹಾಗೂ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳು ಉಗ್ರವಾಗಿ ಖಂಡಿ ಕೃತ್ಯವೆಸಗಿದವರ ಗಡಿಪಾರು ಮಾಡಬೇಕು ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ ತಲಾ 50 ಲಕ್ಷದಂತೆ ಪರಿಹಾರ ನಿಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ತಾಲ್ಲೂಕು ದಂಡಾಧಿಕಾರಿ ಆರತಿ.ಬಿ ರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ, ಪ್ರಾಂತ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಆದಿ ಜಾಂಬವ ಮಹಾಸಭಾ, ಜಯಕರ್ನಾಟಕ ಸಂಘಟನೆ ಭಾಗವಹಿಸಿದ್ದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
