ಮಿಡಿಗೇಶಿ
ಹೋಬಳಿಯ ಚಿನ್ನೇನಹಳ್ಳಿ ಸಮೀಪವಿರುವ ವೀರಣ್ಣನ ಬೆಟ್ಟದಲ್ಲಿರುವ ಕರಡಿಗಳ ಹಾವಳಿಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹೊಸಕೆರೆ ಗ್ರಾಮದ ಹಳೆಯೂರಿನ ಮಧ್ಯದಲ್ಲಿ ಜೂನ್ 22 ರಂದು ಮಧ್ಯರಾತ್ರಿ 01.30 ರ ಸಮಯದಲ್ಲಿ ರಾಜಾರೋಷವಾಗಿ ಕರಡಿ ಓಡಾಡಿದೆ. ಕರಡಿ ಓಡಾಡುವುದನ್ನು ಕಂಡ ಜನತೆ ಭಯದಿಂದ ತತ್ತರಿಸಿ ಹೋಗಿದ್ದಾರೆ. ಇದೇ ರೀತಿ ಮಿಡಿಗೇಶಿ ಹೋಬಳಿಯ ಮಲ್ಲನಾಯಕನ ಹಳ್ಳಿಯ ಬೆಟ್ಟದಲ್ಲಿ, ಬೇಡತ್ತೂರಿನ ಬೆಟ್ಟದಲ್ಲಿ ಹೀಗೆ ಒಟ್ಟಾರೆಯಾಗಿ ಮಿಡಿಗೇಶಿ ಹೋಬಳಿಯಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಕರಡಿಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ನಮ್ಮನ್ನು ರಕ್ಷಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.