ಬಾಗಲಕೋಟೆ:
ನಾವು ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ನೀವು ಬಿಜೆಪಿಗೆ ಓಟ್ ಹಾಕ್ತೀರಾ; ಏಕೆಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಮತ ಹಾಕಿದವರನ್ನು ಪ್ರಶ್ನೆ ಮಾಡಿದ್ದಾರೆ.
ಬಾಗಲಕೋಟೆಯ ಬಾದಾಮಿ ತಾಲೂಕಿನ ಆಲೂರ ಎಸ್ ಕೆ ಗ್ರಾಮದಲ್ಲಿ ಗ್ರಾಮ ಕಚೇರಿ ಕಟ್ಟಡದ ಭೂಮಿ ಪೂಜೆ ನೇರವೇರಿಸಿದ ಬಳಿಕ ಮಾತನಾಡಿದ ಅವರು, ಪಂಚಾಯಿತಿಗೆ ಅನುದಾನ, ಅನ್ನಭಾಗ್ಯ, ಶೂಭಾಗ್ಯ ತಂದಿದ್ದು ನಾವು. ಆದರೆ ಜನ ಬಿಜೆಪಿಗೆ ವೋಟ್ ಹಾಕ್ತಾರೆ ಎಂದು ಆಕ್ರೋಶ ಹೊರಹಾಕಿದರು. ಸ್ವಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದಿದ್ದಕ್ಕೆ ವೇದಿಕೆಯಲ್ಲೇ ಅಸಮಾಧಾನ ಹಂಚಿಕೊಂಡರು. ಬಾದಾಮಿ ಕ್ಷೇತ್ರದಲ್ಲಿ ನಮಗೆ ಲೀಡ್ ಬರುತ್ತೇ ಅಂತ ಅಂದುಕೊಂಡಿದ್ದೆ. ಆದರೆ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿಗೆ 9 ಸಾವಿರ ಲೀಡ್ ಆಗಿದೆ ಎಂದರು. ನೀವು ಹೀಗೇಕೆ ಮಾಡುತ್ತಿದ್ದೀರೋ ಗೊತ್ತಾಗುತ್ತಿಲ್ಲ ಎಂದು ಗ್ರಾಮಸ್ಥರನ್ನು ಪ್ರಶ್ನಿಸಿದರು.
ನಾನು ಬಾದಾಮಿ ಶಾಸಕನಾದ ಮೇಲೆ 1,300 ಕೋಟಿ ಅನುದಾನ ತಂದಿದ್ದೇನೆ. ಜನ ಏನು ನೋಡಿ ಬಿಜೆಪಿ ಗೆ ವೋಟ್ ಹಾಕ್ತಾರೆ ನನಗೆ ಗೊತ್ತಾಗುತ್ತಿಲ್ಲ, ಕೆಲಸ ಮಾಡಿದವರು ನಾವು, ಓಟ್ ಬಿಜೆಪಿಗೆ ಹಾಕ್ತಾರೆ, ಅಭಿವೃದ್ಧಿ ಕೆಲಸ ನಮ್ಮದು ಓಟ್ ಮಾತ್ರ ಬಿಜೆಪಿಗೆ ಎಂದು ಅವರು ಗರಂ ಆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ