ಶಿರಾ:
ಬೆಂದಕಾಳೂರನ್ನು ಸುಂದರ ನಗರವನ್ನಾಗಿ ನಿರ್ಮಿಸಿ ರಾಷ್ಟ್ರದ ಇತಿಹಾಸದಲ್ಲಿ ಬೆಂಗಳೂರೆಂಬ ಹೆಸರನ್ನು ಪಡೆದು ಖ್ಯಾತಿ ಹೊಂದಲು ಕಾರಣರಾದ ನಾಡಪ್ರಭು ಕೆಂಪೇಗೌಡರು ಕೇವಲ ನಾಡಪ್ರಭುವಷ್ಠೆ ಅಲ್ಲ ಅವರು ಓರ್ವ ಮಹಾಪ್ರಭು ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ ಗುರುವಾರ ಕೈಗೊಂಡಿದ್ದ ನಾಡಪ್ರಭು ಕೆಂಪೇಗವಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಶ ದಿಕ್ಕುಗಳಿಗೂ ಬೆಂಗಳೂರನ್ನು ವಿಸ್ತರಿಸಿ ಇಡೀ ವಿಶ್ವವೇ ಬೆಂಗಳೂರಿನತ್ತ ನೋಡಲು ಪ್ರಮುಖ ಕಾರಣವೇ ಕೆಂಪೇಗೌಡರು. ಕರ್ನಾಟಕದ ಇತಿಹಾಸದಲ್ಲಿ ಯಲಹಂಕ ಸಾಮ್ರಾಜ್ಯವು ಅತ್ಯಂತ ವಿಸ್ತಾರವಾಗಿದ್ದು ಈ ರಾಜ ಮನೆತನಕ್ಕೆ ಸೇರಿದ ಕೆಂಪೇಗೌಡರದ್ದು ಮೌಲ್ಯಾಧಾರಿತ ವ್ಯಕ್ತಿತ್ವಾಗಿತ್ತು. ಇಂದು ಬೆಂಗಳೂರು ಅತಿ ಎತ್ತರಕ್ಕೆ ಬೆಳೆಯಲು ಅಹರ್ನಿಶಿ ಶ್ರಮಿಸಿದ ಕೆಂಪೇಗೌಡರ ಆದರ್ಶ ಹಾಗೂ ಗುಣಗಳನ್ನು ಇಂದಿನ ಮಕ್ಕಳು ರೂಢಿಸಿಕೊಳ್ಳಬೇಕು ಎಂದರು.
ಕೇಂಪೇಗೌಡರು ದೂರದೃಷ್ಠಿಯಿಂದ ಬೆಂಗಳೂರನ್ನು ವೈಜ್ಞಾನಿಕವಾಗಿ ನಿರ್ಮಿಸಿದ ಪರಿಣಾಮ ಇಂದಿಗೂ ಅನೇಕ ಸ್ಥಳಗಳು ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿವೆ ಎಂದು ಶಾಸಕ ಬಿ.ಸತ್ಯನಾರಾಯಣ್ ಬಣ್ಣಿಸಿದರು.ತಾ. ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ನಗರ ಠಾಣಾ ಸಿ.ಪಿ.ಐ. ರಂಗಸ್ವಾಮಿ, ಬಿ.ಇ.ಓ. ರಾಮಯ್ಯ, ಪಿ.ಡಬ್ಯು.ಡಿ. ಎ.ಇ.ಇ. ಷಣ್ಮುಖಪ್ಪ, ಆರ್.ಐ. ಮಂಜುನಾಥ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








